ನವದೆಹಲಿ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರು ಚೀನಾದ ಷಿನ್ ಜಿಯಾಂಗ್ ಗೆ ಭೇಟಿ ನೀಡಲಿದ್ದಾರೆ. ಮೇ ತಿಂಗಳಲ್ಲಿ, ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರು ಭೇಟಿ ನೀಡಲಿದ್ದು, ಈ ಬಗ್ಗೆ ಚೀನಾ ಸರ್ಕಾರ ಹಾಗೂ ವಿಶ್ವಸಂಸ್ಥೆ ನಡುವೆ ಒಪ್ಪಂದ ನಡೆದಿದೆ.
ಷಿನ್ ಜಿಯಾಂಗ್ ಪ್ರದೇಶದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ನರಮೇಧ ಮತ್ತು ಇತರ ಅಪರಾಧಗಳು ನಡೆಯುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸಿವೆ.
ತಾವು ಚೀನಾದ ಷಿನ್ ಜಿಯಾಂಗ್ ಗೆ ತೆರಳುವ ವಿಷಯವನ್ನು ಮಾನವ ಹಕ್ಕುಗಳ ವಿಶ್ವಸಂಸ್ಥೆ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಮಾನವ ಹಕ್ಕುಗಳ ಪರಿಷತ್ ಗೆ ವಿಡಿಯೋ ಮೆಸೇಜ್ ಮೂಲಕ ತಿಳಿಸಿದ್ದಾರೆ.
ವಿಶ್ವಸಂಸ್ಥೆ ಭೇಟಿಯನ್ನು ಚೀನಾ ಸರ್ಕಾರ ಸಹ ಒಪ್ಪಿಗೆ ನೀಡಿದ್ದು, ಚೀನಾದಲ್ಲಿ ವಿಶ್ವಸಂಸ್ಥೆ ತಂಡ ಉಳಿದುಕೊಳ್ಳುವುದಕ್ಕೆ, ಸ್ಥಳ ಪರಿಶೀಲನೆಗೆ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದೆ.