ಕಾಸರಗೋಡು: ಭಜನೆಯಿಂದ ಜನಸಾಮಾನ್ಯರೂ ಪರಮಾತ್ಮನನ್ನು ಸುಲಭದಲ್ಲಿ ಒಲಿಸಿಕೊಳ್ಳುವ ಸಾಧ್ಯತೆಯಿದೆ. ಭಜಕರು ಹೆಚ್ಚುತ್ತಿರುವಂತೆ ಸಮಾಜದಲ್ಲಿ ಆಸ್ತಿಕ್ಯ ಭಾವ ಉದ್ದೀಪನಗೊಂಡು ಧರ್ಮ ಸಂಸ್ಕøತಿ ಸಂವರ್ಧನೆಗೊಳ್ಳುವುದು ಎಂಬುದಾಗಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಶ್ರೀಗಳು ನುಡಿದರು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಸಾಂಸ್ಕøತಿಕ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ಭಾಸ್ಕರ ರಾವ್ ಮಂಗಳೂರು, ರಮೇಶ್ ಕುದ್ರೆಕ್ಕೋಡು, ಕೆ.ವಾಮನ ರಾವ್ ಬೇಕಲ್, ಕೆ.ಪಿ.ಸಂಧ್ಯಾರಾಣಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

