HEALTH TIPS

ವಿಶ್ವದಾದ್ಯಂತ ಒಮಿಕ್ರಾನ್ ​ವೈರಸ್ ಗುಪ್ತ ತಳಿ ವ್ಯಾಪಕ ಪ್ರಸರಣ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

           ನವದೆಹಲಿ: ಜಗತ್ತಿನಲ್ಲಿ ಬಿಎ.2 ಎಂಬ ಒಮಿಕ್ರಾನ್ ರೂಪಾಂತರಿಯ 'ಗುಪ್ತ-ತಳಿ'ಯೇ ಮೇಲುಗೈ ಸಾಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿದೆ. ಒಮಿಕ್ರಾನ್​ನ ಅಪಾಯಕಾರಿ ಬಿಎ.1 ಮತ್ತು ಬಿಎ,1.1 ತಳಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಪ್ರಸಾರವಾಗುವ ಸಾಮರ್ಥ್ಯವನ್ನು ಈ ಉಪ-ತಳಿ ಹೊಂದಿದೆ. ಆದರೆ ಇದರಿಂದ ಹೆಚ್ಚು ತೀವ್ರ ರೀತಿಯಲ್ಲಿ ವ್ಯಾಧಿ ಉಂಟಾಗುತ್ತದೆನ್ನುವುದಕ್ಕೆ ಇದುವರೆಗೆ ಪುರಾವೆ ಸಿಕ್ಕಿಲ್ಲ.


             ಮುಂದೆ ಬರಬಹುದಾದ ಕೋವಿಡ್ 4ನೇ ಅಲೆ ಹಿಂದಿನದ್ದಕ್ಕಿಂತ ಭಿನ್ನವಾಗಿರಲಿದೆ ಎಂದು ಕೋಲ್ಕತದ ಕೆಲವು ತಜ್ಞರು ಎಚ್ಚರಿಸಿದ್ದಾರೆ. ಈ ವೇಳೆ ಜನರು ಉಸಿರಾಟದ ಸಮಸ್ಯೆಗಿಂತ ಹೆಚ್ಚಾಗಿ ಹೊಟ್ಟೆ ಮತ್ತು ಕರುಳಿನ ತೊಂದರೆಗಳಿಂದ ಬಳಲಬೇಕಾಗಬಹುದು ಎಂದು ಅವರು ಹೇಳಿದ್ದಾರೆ.                     ಹೊಟ್ಟೆ ನೋವು, ವಾಕರಿಕೆ ಮತ್ತು ಭೇದಿ ಮುಂತಾದ ಲಕ್ಷಣಗಳು ಅಧಿಕವಾಗಿ ಕಾಣಿಸುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಿಎ.2 ಪ್ರಭೇದದಿಂದ ನಾಲ್ಕನೇ ಅಲೆ ಏಳಬಹುದು ಎಂಬ ಭೀತಿ ಎದುರಾಗಿದೆ. ಆದರೆ, ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅದರ ಪತ್ತೆಯಾಗದಿರುವುದು ಬಿಎ.2 ರೂಪಾಂತರಿಯ ದೊಡ್ಡ ಸಮಸ್ಯೆಯಾಗಿದೆ. ಈ ಕಾರಣ್ಕಕಾಗಿಯೇ ಅದನ್ನು 'ಗುಪ್ತ-ತಳಿ' ಎನ್ನಲಾಗುತ್ತದೆ. ಯುರೋಪ್ ಮತ್ತು ಏಷ್ಯದ ಅನೇಕ ದೇಶಗಳಲ್ಲಿ ಇದೀಗ ಅದರ ಹಾವಳಿ ಜಾಸ್ತಿಯಾಗಿದೆ.

 

            ಪ್ರಯಾಣ ನಿರ್ಬಂಧ   ಸಡಿಲ: ಅಮೆರಿಕದಿಂದ ಭಾರತಕ್ಕೆ ಪ್ರಯಾಣಿಸುವವರ ಮೇಲೆ ಹೇರಲಾಗಿದ್ದ ನಿರ್ಬಂಧದ ಮಟ್ಟವನ್ನು ಲೆವೆಲ್ 3ರಿಂದ (ಹೆಚ್ಚು ಅಪಾಯ) ಲೆವೆಲ್ 1ಕ್ಕೆ (ಕಡಿಮೆ ಅಪಾಯ) ಬದಲಾಯಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಸೋಮವಾರ ಈ ಕ್ರಮ ಕೈಗೊಂಡಿದೆ. ಇದು ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆ ಕ್ಷೀಣಿಸಿರುವುದರ ಸೂಚನೆಯಾಗಿದೆ. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಭಾರತಕ್ಕೆ ಪ್ರಯಾಣಿಸಿದರೆ ಗಂಭೀರ ಕೋವಿಡ್ ಸೋಂಕು ತಗಲುವ ಸಂಭವ ಕಡಿಮೆ ಎಂದು ಸಿಡಿಸಿ ಹೇಳಿಕೆ ತಿಳಿಸಿದೆ.

         ವ್ಯಾಕ್ಸಿನ್ ಬದಲು ಸಲೈನ್!: ಕೋವಿಡ್ ವ್ಯಾಕ್ಸಿನ್ ಎಂದು ಹೇಳಿ ಸಲೈನ್ ಸಲ್ಯುಷನ್ ನೀಡುತ್ತಿದ್ದ ಸಿಂಗಾಪುರದ ವೈದ್ಯನೊಬ್ಬನನ್ನು ಬಂಧಿಸಲಾಗಿದ್ದು ಸೇವೆಯಿಂದ ಅಮಾನತು ಮಾಡಲಾಗಿದೆ. ಲಸಿಕೆ ಅಭಿಯಾನದ ತಂಡವೊಂದರ ಸದಸ್ಯ 33 ವರ್ಷದ ಜಿಪ್ಸನ್ ಕುಹಾ ರೋಗಿಗಳನ್ನು ವಂಚಿಸಿದ ವೈದ್ಯ. ಆತ ಲಸಿಕೆ ಬದಲು ಸಲೈನ್ ಚುಚ್ಚಿ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಲಸಿಕೆ ರಿಜಿಸ್ಟ್ರಿಗೆ ವ್ಯಾಕ್ಸಿನ್ ಕೊಟ್ಟಿದ್ದಾಗಿ ಮಾಹಿತಿ ಅಪ್​ಲೋಡ್ ಮಾಡುತ್ತಿದ್ದ. ಆತನ ವೈದ್ಯಕೀಯ ನೋಂದಣಿಯನ್ನು ಸಿಂಗಾ ಪುರ ಮೆಡಿಕಲ್ ಕೌನ್ಸಿಲ್ ಮಾ.23-18 ತಿಂಗಳ ಕಾಲ ರದ್ದುಪಡಿಸಿದೆ.

         ಲಸಿಕೆ ಮಿಶ್ರಣಕ್ಕೆ ಕಾಲ ಕೂಡಿಬಂದಿಲ್ಲ: ಕರೊನಾ ತಡೆಗಾಗಿ ನೀಡುವ ವಿಭಿನ್ನ ಲಸಿಕೆಗಳ ಡೋಸ್ ಮಿಶ್ರಣಕ್ಕೆ (ವ್ಯಾಕ್ಸಿನ್ ಮಿಕ್ಸಿಂಗ್) ಅಗತ್ಯವಾದ ವೈಜ್ಞಾನಿಕ ಪುರಾವೆ ಇನ್ನೂ ಲಭ್ಯವಾಗಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ತಿಳಿಸಿದ್ದಾರೆ.

            ಪ್ರತಿಕಾಯ ಹೆಚ್ಚಳ: ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಬೂಸ್ಟರ್ ಡೋಸ್​ನಿಂದ ಮಾನವ ದೇಹದಲ್ಲಿ ಪ್ರತಿಕಾಯ ಹೆಚ್ಚಿರುವುದು ಐಸಿಎಂಆರ್ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಸಚಿವೆ ಭಾರತಿ ಸದನದಲ್ಲಿ ಹೇಳಿದರು. ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಕರೊನಾ ಸಾವಿನ ಪ್ರಮಾಣ ಅತಿ ಕಡಿಮೆ ಪ್ರಮಾಣದಲ್ಲಿರುವ ದೇಶಗಳಲ್ಲಿ ಭಾರತವೂ ಸೇರಿದೆ.

ಪ್ರಯಾಣ ನಿರ್ಬಂಧ ಸಡಿಲ: ಅಮೆರಿಕದಿಂದ ಭಾರತಕ್ಕೆ ಪ್ರಯಾಣಿಸುವವರ ಮೇಲೆ ಹೇರಲಾಗಿದ್ದ ನಿರ್ಬಂಧದ ಮಟ್ಟವನ್ನು ಲೆವೆಲ್ 3ರಿಂದ (ಹೆಚ್ಚು ಅಪಾಯ) ಲೆವೆಲ್ 1ಕ್ಕೆ (ಕಡಿಮೆ ಅಪಾಯ) ಬದಲಾಯಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಸೋಮವಾರ ಈ ಕ್ರಮ ಕೈಗೊಂಡಿದೆ. ಇದು ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆ ಕ್ಷೀಣಿಸಿರುವುದರ ಸೂಚನೆಯಾಗಿದೆ. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಭಾರತಕ್ಕೆ ಪ್ರಯಾಣಿಸಿದರೆ ಗಂಭೀರ ಕೋವಿಡ್ ಸೋಂಕು ತಗಲುವ ಸಂಭವ ಕಡಿಮೆ ಎಂದು ಸಿಡಿಸಿ ಹೇಳಿಕೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries