ಮಂಜೇಶ್ವರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಉಪ್ಪಳ ಘಟಕದ ವಾರ್ಷಿಕೋತ್ಸವ ಇತ್ತೀಚೆಗೆ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, "ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸೇವಾ ಸಂಸ್ಥೆಯು ಕಲಾ ಕ್ಷೇತ್ರದ ಅತೀದೊಡ್ಡ ಸೇವಾಸಂಸ್ಥೆಯಾಗಿದೆ. ಯಕ್ಷಗಾನ ಕಲಾವಿದರ ಪಾಲಿಗೆ ಕಾಮಧೇನುವಾಗಿದೆ. ಕೊರೋನಾ ಸಂಕಷ್ಟದಂತ ಸಂದರ್ಭದಲ್ಲೂ ಕಲಾವಿದರಿಗೆ ಸ್ಪಂದಿಸಿ ಕಾರ್ಯ ಪ್ರವೃತ್ತವಾದದ್ದು ಶ್ಲಾಘನಾರ್ಹ. ಸಂಸ್ಥೆಯ ಕಾರ್ಯ ಚಟುವಟಿಕೆಗೆ ಕಾರಣಕರ್ತ ಹಾಗೂ ಬೆನ್ನೆಲುಬಾಗಿರುವ ಸತೀಶ ಶೆಟ್ಟಿ ಪಟ್ಲ ಅವರು ನಾಡಿನ ದಾನಿಗಳ ಸಹಾಯವನ್ನು ಬಡ ಯಕ್ಷಗಾನ ಕಲಾವಿದರ ಏಳ್ಗೆಗೆ ಜೋಡಿಸಿಕೊಂಡದ್ದು ಮಹಾನ್ ಕಾರ್ಯ. ನಾಡಿನ ಎಲ್ಲಾ ಜನತೆ ಪೌಂಡೇಶನ್ ಕಾರ್ಯದಲ್ಲಿ ಕೈ ಜೋಡಿಸ ಬೇಕಿದೆ" ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ ಆರ್ ಶೆಟ್ಟಿ ಪೆÇಯ್ಯೆಲು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ , ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ದೀಕ್ಷಾ ವುಡ್ ಇಂಡಸ್ಟ್ರೀಸ್ ಕುಂಜತ್ತೂರು ಇದರ ಮಾಲಕ ಬಾಲಕೃಷ್ಣ ಭಾಗವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಉಪ್ಪಳ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಬಳಕ್ಕÀ, ಕುಂಜತ್ತೂರು ದೇವಸ್ಥಾನದ ಪವಿತ್ರಪಾಣಿ ಕೃಷ್ಣ ಭಟ್, ಹಿರಿಯರಾದ ರಮೇಶ್ ಮಂಜೇಶ್ವರ ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಮೋಹನ್ ಚಕ್ರತೀರ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಟ್ಲ ಫೌಂಡೇಶನ್ ನ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿಯವರನ್ನು ಕುಂಜತ್ತೂರು ಮಹಾಲಿಂಗೇಶ್ವರ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಉಪ್ಪಳ ಘಟಕದ ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ ಸ್ವಾಗತಿಸಿ, ದಾಮೋದರ ಶೆಟ್ಟಿ ಕುಂಜತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಸಲುವಾಗಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ ಅದ್ದೂರಿಯಾಗಿ ಜರಗಿತು.

