HEALTH TIPS

ಏಪ್ರಿಲ್ 19 ರಂದು ಸ್ವಚ್ಛ ಕಾಸರಗೋಡು ದಿನ: ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ

              ಕಾಸರಗೋಡು: ರಾಜ್ಯ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮೇ 3 ರಿಂದ 9 ರವರೆಗೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಅಲಾಮಿಪಲ್ಲಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಏ. 19ರಂದು ಸ್ವಚ್ಛ ಕಾಸರಗೋಡು ದಿನವನ್ನಾಗಿ ಆಚರಿಸಲಾಗುವುದು. ಜಿಲ್ಲಾ ಮಟ್ಟದ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಎಲ್ಲಾ ಕಚೇರಿಗಳಿಗೆ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸಂಘಟನಾ ಸಮಿತಿ ನಿರ್ಧರಿಸಿದೆ. ಎಲ್ಲಾ ಕಚೇರಿ, ಆವರಣ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವುದು, ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯ ಎಂದು ವಿಂಗಡಿಸಿ ಗೊಬ್ಬರವಾಗಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು.   ಕೊಳೆಯದಿರುವ ತ್ಯಾಜ್ಯವನ್ನು ಕ್ಲೀನ್ ಕೇರಳ ಕಂಪನಿ ಅಥವಾ ಇತರ ಸ್ಕ್ರ್ಯಾಪ್ ಡೀಲರ್‍ಗಳಿಗೆ ಸಕಾಲದಲ್ಲಿ ಹಸ್ತಾಂತರಿಸಬೇಕು.  ಜಿಲ್ಲಾ ಶುಚಿತ್ವ ಮಿಷನ್, ಯುವಜನ ಕಲ್ಯಾಣ ಮಂಡಳಿ ಕೇರಳ ತಂಡ ಮತ್ತು ಯೂತ್ ಕ್ಲಬ್‍ಗಳ ಸಹಯೋಗದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries