ತಿರುವನಂತಪುರಂ: ಕೆಎಸ್‍ಆರ್‍ಟಿಸಿ ನೌಕರರಿಗೆ ಶೀಘ್ರದಲ್ಲೇ ವೇತನ ವಿತರಣೆ ನಡೆಯಲಿದೆ. ಇದಕ್ಕಾಗಿ ಆರ್ಥಿಕ ಇಲಾಖೆ ತಕ್ಷಣವೇ 30 ಕೋಟಿ ರೂ. ಬಿಡುಗಡೆಗೊಳಿಸಲಿದೆ. ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ವೇತನ ವಿತರಣೆಗೆ ಒಟ್ಟು 97 ಕೋಟಿ ರೂ. ಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಈಗ 30 ಕೋಟಿ ಮಂಜೂರು ಮಾಡಿದೆ.
ಏಪ್ರಿಲ್ 13 ರ ವರೆಗೆ ಕಾರ್ಮಿಕರಿಗೆ ಮಾರ್ಚ್ ತಿಂಗಳ ವೇತನವೂ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ಘೋಷಿಸಲಾಗಿತ್ತು. ವಿಷುವಿಗೆ ಮುನ್ನವೇ ವೇತನ ನೀಡಬೇಕು ಎಂದು ನೌಕರರು ಒತ್ತಾಯಿಸಿದ್ದರು. ಕೆಎಸ್‍ಆರ್‍ಟಿಸಿಯ ಎಡ ಒಕ್ಕೂಟಗಳು ಕೂಡ ಏಪ್ರಿಲ್ 28 ರಂದು ಮುಷ್ಕರ ನಡೆಸುವುದಾಗಿ ಘೋಷಿಸಿದ್ದವು. ಇದರ ಬೆನ್ನಲ್ಲೇ ಸಾರಿಗೆ ಇಲಾಖೆಯ ಮನವಿ ಮೇರೆಗೆ ಹಣಕಾಸು ಇಲಾಖೆ ಮುಂದಾಗಿದೆ.
ಸಾಮಾನ್ಯವಾಗಿ 25,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ವೇತನ ವಿತರಣೆ ಮತ್ತು ಪಿಂಚಣಿಗಾಗಿ ತಿಂಗಳಿಗೆ 97 ಕೋಟಿ ರೂ. ಬೇಕಾಗುತ್ತದೆ. ಮುಷ್ಕರ ಘೋಷಣೆ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ 75 ಕೋಟಿ ರೂ. ವಿತರಣೆಗೆ ಬೇಕಾಗಿ ಬರಲಿದೆ.ಅಂದಾಜಿನ ಪ್ರಕಾರ ತಕ್ಷಣ ಘೋಷಿಸಿದ 30 ಕೋಟಿ ರೂ.ಒಂದು ಹಂತದ ವರೆಗೆ ಸಮಾಧಾನ ತರಲಿದೆ. ಈ ಬಗ್ಗೆ ಒಕ್ಕೂಟಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಎಸ್ ಆರ್ ಟಿಸಿಯ ಎಲ್ಲ ನೌಕರರಿಗೆ ವೇತನ ನೀಡದೆ ಮುಷ್ಕರ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
ಆದರೆ, ಪಿಂಚಣಿ ವಿತರಣೆ, ಸಾಲ ಮರುಪಾವತಿ ಹಾಗೂ ವೇತನಕ್ಕಾಗಿ ಹಣಕಾಸು ಇಲಾಖೆ ಕಳೆದ ಒಂದು ತಿಂಗಳಲ್ಲಿ 230 ಕೋಟಿ ರೂ.ಗೂ ಹೆಚ್ಚು ಪಾವತಿಸಿದೆ ಎಂದು ಸರಕಾರ ಹೇಳಿದೆ.





