ಮಲಪ್ಪುರಂ : ದೇವಸ್ಥಾನವೊಂದು ತಾನು ನೆಲೆಗೊಂಡಿರುವ ನಗರದ ಮುಸ್ಲಿಂ ಸಮುದಾಯಕ್ಕೆ ಇಫ್ತಾರ್ ಔತಣಕೂಟ ಏರ್ಪಡಿಸಿದ್ದಾಗಿ Thenewsminute ವರದಿ ಮಾಡಿದೆ. ಮುಸ್ಲಿಂ ವಿರೋಧಿ ಪ್ರಚಾರಗಳು ಮತ್ತು ಕೋಮು ಸೌಹಾರ್ದತೆಯ ಮೇಲಿನ ಬೆದರಿಕೆಗಳು ದೇಶವ್ಯಾಪಿ ಏರಿಕೆಯಾಗಿರುವ ನಡುವೆ ಈ ಸಕಾರಾತ್ಮಕ ಸುದ್ದಿ ಬಂದಿದೆ.
0
samarasasudhi
ಏಪ್ರಿಲ್ 13, 2022
ಮಲಪ್ಪುರಂ : ದೇವಸ್ಥಾನವೊಂದು ತಾನು ನೆಲೆಗೊಂಡಿರುವ ನಗರದ ಮುಸ್ಲಿಂ ಸಮುದಾಯಕ್ಕೆ ಇಫ್ತಾರ್ ಔತಣಕೂಟ ಏರ್ಪಡಿಸಿದ್ದಾಗಿ Thenewsminute ವರದಿ ಮಾಡಿದೆ. ಮುಸ್ಲಿಂ ವಿರೋಧಿ ಪ್ರಚಾರಗಳು ಮತ್ತು ಕೋಮು ಸೌಹಾರ್ದತೆಯ ಮೇಲಿನ ಬೆದರಿಕೆಗಳು ದೇಶವ್ಯಾಪಿ ಏರಿಕೆಯಾಗಿರುವ ನಡುವೆ ಈ ಸಕಾರಾತ್ಮಕ ಸುದ್ದಿ ಬಂದಿದೆ.
ಲಕ್ಷ್ಮೀ ನರಸಿಂಹ ಮೂರ್ತಿ ದೇವಸ್ಥಾನವು ಕೇರಳದ ಮಲಪ್ಪುರಂ ಜಿಲ್ಲೆಯ ಕೋಟಕಲ್ ಪಟ್ಟಣದಲ್ಲಿದೆ. ಗುರುವಾರ, ಏಪ್ರಿಲ್ 7 ರಂದು, ದೇವಾಲಯದ ಆವರಣದ ಪಕ್ಕದ ಮನೆಯೊಂದರಲ್ಲಿ ಇಫ್ತಾರ್ ಭೋಜನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಭಾಗವಹಿಸಿದ್ದರು.
ಸುಮಾರು 600 ಮಂದಿ ಪಾಲ್ಗೊಂಡು ಭೋಜನ ಸೇವಿಸಿದರು ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
"ನಾವು ಇಫ್ತಾರ್ ಔತಣಕೂಟವನ್ನು ಆಯೋಜಿಸಲು ನಿರ್ಧರಿಸಿದ್ದು ಏಕೆಂದರೆ ನಮ್ಮ ಸಾಮರಸ್ಯ ಮತ್ತು ಶಾಂತಿ ಕದಡಿದ ಕಾರಣ ಅಲ್ಲ, ಆದರೆ ನಾವು ಈಗಾಗಲೇ ಇರುವ ಶಾಂತಿಯನ್ನು ಮುಂದುವರಿಸಲು ಬಯಸುತ್ತೇವೆ" ಎಂದು ದೇವಾಲಯದ ಮುಖ್ಯಸ್ಥ ಮೋಹನನ್ ನಾಯರ್ ಹೇಳಿದರು.
ದೇವಸ್ಥಾನದ ಸಮಿತಿಯ ಸದಸ್ಯರು ಭೋಜನಕೂಟದಲ್ಲಿ ಭಾಗವಹಿಸಲು ಜನರ ಮನೆಗಳಿಗೆ ತೆರಳಿ ದೇವಸ್ಥಾನ ಸಮಿತಿಯು ಆಮಂತ್ರಣ ನೀಡಿತ್ತು. ಇದೇ ದೇವಸ್ಥಾನದಲ್ಲಿ ಕಳೆದ ವರ್ಷವೂ ಇದೇ ರೀತಿಯ ಇಫ್ತಾರ್ ಔತಣಕೂಟ ಏರ್ಪಡಿಸಲಾಗಿತ್ತು.