HEALTH TIPS

5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

             ಆಲಪ್ಪುಳ: ದುಬಾರಿ ಬ್ರೇಕ್​ಫಾಸ್ಟ್​ ನೀಡಿದ ಹೋಟೆಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಆಲುಪ್ಪುಳ ಕ್ಷೇತ್ರದ ಶಾಸಕ ಚಿತ್ತರಂಜನ್​ ಇಟ್ಟಿರುವ ಬೇಡಿಕೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದಿರುವ ಜಿಲ್ಲಾಧಿಕಾರಿ ರೇಣು ರಾಜ್​, ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೂ ತಿಳಿಸಿರುವುದಾಗಿ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ನೀಡಿದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

           ಶಾಸಕ ಚಿತ್ತರಂಜನ್​ ಪ್ರಕಾರ ಹೋಟೆಲ್​ ಒಂದು ಐದು ದೋಸೆ ಮತ್ತು ಎರಡು ಮೊಟ್ಟೆ ಕರಿಗೆ 184 ರೂಪಾಯಿ ಚಾರ್ಜ್​ ಮಾಡಿದರು. ದುಬಾರಿ ಹಣವನ್ನು ಚಾರ್ಜ್​ ಮಾಡಿದ್ದಾರೆ, ಹೋಟೆಲ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬೇಡಿಕೆ ಇಟ್ಟು ದೂರು ದಾಖಲಿಸಿದ್ದರು. ಅಲ್ಲದೆ, ಶಾಸಕರು ಮಾಡಿದ್ದ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಚಿವರ ಮಟ್ಟದಲ್ಲೂ ಬಹಳ ಚರ್ಚೆಯಾಗಿತ್ತು.

           ಸ್ವಲ್ಪ ಫ್ಯಾನ್​ ಗಾಳಿಯನ್ನು ಜೋರು ಮಾಡಿದರೆ ತಟ್ಟೆಯಿಂದ ಹಾರಿ ಹೋಗುವಷ್ಟು ತೆಳುವಾಗಿದ್ದ ದೋಸೆಗೆ ಒಂದಕ್ಕೆ 15 ರೂಪಾಯಿ ಚಾರ್ಜ್​ ಮಾಡಿದರು. ಅಲ್ಲದೆ, ಮೊಟ್ಟೆಯ ಮೇಲೆ ಹಾಕುವ ಅಲ್ಪ ಪ್ರಮಾಣದ ಗ್ರೇವಿಗೂ 4.5 ರೂಪಾಯಿ ಚಾರ್ಜ್​ ಮಾಡಲಾಗಿತ್ತು. ಎರಡು ಮೊಟ್ಟೆ 50 ರೂಪಾಯಿ ಚಾರ್ಜ್​ ಮಾಡಿದ್ದರು. ಅದು ಸ್ಟಾರ್​ ಹೋಟೆಲ್​ ಆಗಿರಲಿಲ್ಲ. ಎಸಿ ಕೂಡ ಇರಲಿಲ್ಲ. ಆದರೆ, ಜಾಹಿರಾತಿನಲ್ಲಿ ಎಸಿ ಇದೆ ಎಂದು ಬರೆದುಕೊಂಡಿದ್ದಾರೆ. ಊಟದ ಮೆನು ಕೂಡ ಅಲ್ಲಿಲ್ಲ ಎಂದು ಚಿತ್ತರಂಜನ್​ ಪೊಸ್ಟ್​ ಮಾಡಿದ್ದಾರೆ.

          ಕೆಲವು ಹೋಟೆಲ್‌ಗಳಲ್ಲಿ ಎರಡು ಕರಿಗಳೊಂದಿಗೆ ಸಸ್ಯಾಹಾರಿ ಊಟಕ್ಕೆ 100 ರೂ. ಚಾರ್ಜ್​ ಮಾಡಲಾಗುತ್ತದೆ. ಕೆಲವು ಸ್ಥಳೀಯ ಹೋಟೆಲ್‌ಗಳು ಒಂದು ಚಹಾವನ್ನು 5 ರೂ. ಮತ್ತು ಊಟ 30 ರೂ.ಗೆ ನೀಡುವ ಸಮಯದಲ್ಲಿ ಇಷ್ಟೊಂದು ಹಣ ಚಾರ್ಜ್​ ಮಾಡುವುದು ನಿಜಕ್ಕೂ ಶೋಷಣೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries