ನವದೆಹಲಿ: ಲೋಕಸಭೆ ಕಲಾಪದ ವೇಳೆ ಡೆಸ್ಕ್‍ನಲ್ಲಿ ಕುಳಿತು ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ಸಂಸದ ಶಶಿ ತರೂರ್ ಮಾತನಾಡಿರುವ ವಿಡಿಯೋವನ್ನು ಟ್ರೋಲ್‍ಗಳು ವ್ಯಾಪಕವಾಗಿ ಹಂಚಿ ಸಂಭ್ರಮಿಸಿದ್ದಾರೆ. ತರೂರ್ ಅವರು ಮೇಜಿನ ಮೇಲೆ ಒರಗಿಕೊಂಡು ಸುಪ್ರಿಯಾ ಅವರ ಮಾತನ್ನು ಕೇಳುತ್ತಿರುವ ವೀಡಿಯೊವನ್ನು ಅಲ್ಲು ಅರ್ಜುನ್ ಚಿತ್ರ ಪುಷ್ಪದಿಂದ ಶ್ರೀವಲ್ಲಿ ಹಾಡಿನೊಂದಿಗೆ ಪ್ರಸಾರ ಮಾಡಲಾಗುತ್ತಿದೆ.
ಹಿರಿಯ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬುಲ್ಲಾ ಮಾತನಾಡುತ್ತಿದ್ದಾಗ ತರೂರ್ ಮತ್ತು ಸುಪ್ರಿಯಾ ತೆರೆಮರೆಯಲ್ಲಿ ಏನೇನೋ ಚರ್ಚೆ ನಡೆಸುತ್ತಿದ್ದರು. ಲೋಕಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ತರೂರ್ ಮತ್ತು ಸುಪ್ರಿಯಾ ಮಾತನಾಡುತ್ತಿದ್ದರು.
ಈ ಹಿಂದೆ ಸಂಸತ್ ಅಧಿವೇಶನದ ವೇಳೆ ತರೂರ್ ಅವರು ಮಹಿಳಾ ಸಂಸದರ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದರು. ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್, ಕಾಂಗ್ರೆಸ್ ಸಂಸದೆ ಜ್ಯೋತಿ ಮಣಿ ಸೆನ್ನಿಮಲೈ, ಡಿಎಂಕೆ ಸಂಸದೆ ತಮಿಳಚಿ ತಂಕಪಾಂಡಿಯನ್, ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಮತ್ತು ಅಮರಿಂದರ್ ಸಿಂಗ್ ಅವರ ಪತ್ನಿ ಮತ್ತು ಪಂಜಾಬ್ ಸಂಸದೆ ಪ್ರಣೀತ್ ಕೌರ್ ಅವರೊಂದಿಗೆ ಚಿತ್ರವನ್ನು ತೆಗೆದಿದ್ದರು.
ಶಶಿ ತರೂರ್ ಅವರು ಪೋಟೋವನ್ನು ಟ್ವೀಟ್ ಮಾಡಿ 'ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳಿದರು, ಇಂದು ಬೆಳಿಗ್ಗೆ ನನ್ನ ಆರು ಸಹ ಸಂಸದರೊಂದಿಗೆ' ಎಂಬ ಶೀರ್ಷಿಕೆಯೊಂದಿಗೆ ಪೋಟೋ ಹಮಚಿ ಹುಬ್ಬೇರಿಸಿದ್ದರು. ಇದರ ಬೆನ್ನಲ್ಲೇ ಈ ಪೋಸ್ಟ್ ಭಾರೀ ಟೀಕೆಗೆ ಗುರಿಯಾಯಿತು. ಲೋಕಸಭೆ ಮಹಿಳೆಯರನ್ನು ಸೌಂದರ್ಯದಿಂದ ಅಳೆಯುವ ಸ್ಥಳವಲ್ಲ ಎಂದು ಹಲವರು ಟೀಕಿಸಿದ್ದಾರೆ. .





