ನವದೆಹಲಿ : ಭಾರತದಲ್ಲಿರುವ ಎಲ್ಲಾ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮಾಲಿಕರುಗಳ ಪೈಕಿ ಶೇ 61.8ರಷ್ಟು ಮಂದಿ ಸಾಮಾನ್ಯ ವರ್ಗದವರಾಗಿದ್ದಾರೆ ಎಂದರು ಸರಕಾರಿ ಅಂಕಿಅಂಶಗಳನ್ನು ಉಲ್ಲೇಖಿಸಿ The Hindu ವರದಿ ಮಾಡಿದೆ.
0
samarasasudhi
ಏಪ್ರಿಲ್ 14, 2022
ನವದೆಹಲಿ : ಭಾರತದಲ್ಲಿರುವ ಎಲ್ಲಾ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮಾಲಿಕರುಗಳ ಪೈಕಿ ಶೇ 61.8ರಷ್ಟು ಮಂದಿ ಸಾಮಾನ್ಯ ವರ್ಗದವರಾಗಿದ್ದಾರೆ ಎಂದರು ಸರಕಾರಿ ಅಂಕಿಅಂಶಗಳನ್ನು ಉಲ್ಲೇಖಿಸಿ The Hindu ವರದಿ ಮಾಡಿದೆ.
ಇತರ ಹಿಂದುಳದ ವರ್ಗಗಳಿಗೆ ಮೀಸಲಾತಿ ಕುರಿತಂತೆ ಪರಿಶೀಲಿಸಿದ್ದ ಮಂಡಲ ಆಯೋಗದ ಪ್ರಕಾರ 'ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದಿರುವ' ವರ್ಗಗಳು ಸಾಮಾನ್ಯ ವರ್ಗಗಳಾಗಿವೆ.
ಎಂಎಸ್‍ಎಂಇ ಅಭಿವೃದ್ಧಿ ಆಯುಕ್ತರ ಕಚೇರಿಯಿಂದ ಲಭ್ಯ ಅಂಕಿಅಂಶಗಳ ಪ್ರಕಾರ ಮಾರ್ಚ್ 31ರಂದು ಇದ್ದಂತೆ ದೇಶದಲ್ಲಿನ 80.16 ಲಕ್ಷ ಉದ್ದಿಮೆಗಳ ಪೈಕಿ 49.56 ಲಕ್ಷ ಉದ್ದಿಮೆಗಳು ಸಾಮಾನ್ಯ ವರ್ಗದ ಉದ್ಯಮಿಗಳ ಒಡೆತನದಲ್ಲಿವೆ.
ಇತರ ಹಿಂದುಳಿದ ವರ್ಗಗಳು ಶೇ 30ರಷ್ಟು ಅಥವಾ 23.31 ಲಕ್ಷ ಎಂಎಸ್‍ಎಂಇ ಘಟಕಗಳ ಒಡೆತನ ಹೊಂದಿದ್ದು ಇವುಗಳಲ್ಲಿ ಶೇ 41ರಷ್ಟು ತಮಿಳುನಾಡು (ಶೇ 14.5 ಅಥವಾ 3.37 ಲಕ್ಷ ಘಟಕಗಳು), ಮಹಾರಾಷ್ಟ್ರ (14.4% ಅಥವಾ 3.35 ಲಕ್ಷ ಘಟಕಗಳು) ಮತ್ತು ರಾಜಸ್ಥಾನ (ಶೇ 12.4 ಅಥವಾ 2.89 ಲಕ್ಷ ಘಟಕಗಳು) ಅನ್ನು ಹೊಂದಿವೆ.
ಅಂಕಿಅಂಶಗಳ ಪ್ರಖಾರ ಶೇ 6.8ರಷ್ಟು ಅಥವಾ 5.43 ಲಕ್ಷ ಘಟಕಗಳು ಪರಿಶಿಷ್ಟ ಜಾತಿ ವರ್ಗದವರ ಒಡೆತನದಲ್ಲಿದ್ದರೆ 1.68 ಲಕ್ಷ ಅಥವಾ ಶೇ2.1ರಷ್ಟು ಘಟಕಗಳು ಪರಿಶಿಷ್ಟ ಪಂಗಡಗಳ ಒಡೆತನದಲ್ಲಿವೆ. 18,000ಕ್ಕೂ ಅಧಿಕ ಘಟಕಗಳನ್ನು ಗುರುತಿಸಿಲ್ಲದ ಎಂದು ವರ್ಗೀಕರಿಸಲಾಗಿದೆ.
ಸರಕಾರದ ಪ್ರಕಾರ ರೂ. 1 ಕೋಟಿಯನ್ನು ದಾಟದ ಮೌಲ್ಯದ ಉಪಕರಣಗಳನ್ನು ಹೊಂದಿರುವ ಹಾಗೂ ವಾರ್ಷಿಕ ರೂ. 5 ಕೋಟಿ ದಾಟದ ವ್ಯವಹಾರ ಹೊಂದಿದ ಉದ್ದಿಮೆಗಳು ಮೈಕ್ರೋ ಉದ್ದಿಮೆಗಳಾಗಿವೆ. ಸಣ್ಣ ಉದ್ದಿಮೆಗಳಿಗೆ ಈ ಎರಡು ಮಾನದಂಡಗಳು ಕ್ರಮವಾಗಿ ರೂ. 10 ಕೋಟಿ ಹಾಗೂ ರೂ. 50 ಕೋಟಿಯಾಗಿದ್ದರೆ, ರೂ. 510 ಕೋಟಿ ಹೂಡಿಕೆ ಹಾಗೂ ರೂ. 250 ಕೋಟಿ ವ್ಯವಹಾರ ಹೊಂದಿರುವ ಉದ್ದಿಮೆಗಳನ್ನು ಮಧ್ಯಮ ಗಾತ್ರದ ಉದ್ದಿಮೆಗಳು ಎಂದು ಸರಕಾರ ಪರಿಗಣಿಸುತ್ತದೆ.