ಬದಿಯಡ್ಕ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ಶಮಾ ವಳಕ್ಕುಂಜ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಬದಿಯಡ್ಕ ಸುನಾದ ಸಂಗೀತ ಶಾಲೆಯ ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು ಇವರ ಶಿಷ್ಯೆಯಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ವಿದ್ಯಾರ್ಥಿನಿ. ಸಮಾಜ ಸೇವಕ ಮಹೇಶ್ ವಳಕುಂಜ- ಕಲ್ಲಕಟ್ಟ ಶಾಲೆಯ ಅಧ್ಯಾಪಿಕೆ ದುರ್ಗಾ ಶಾಲಿನಿ ದಂಪತಿಯ ಪುತ್ರಿ.




-Shama.jpg)
