ಉಪ್ಪಳ : ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯಂತೆ ಶಾಲಾ ಮಟ್ಟದಲ್ಲಿ ವಾಚನಾ ಮಿತ್ರತ್ವ ಎಂಬ ವಿನೂತನ ಕಾರ್ಯಕ್ರಮ ಕೇರಳ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು ಅದರಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ವಾಚನಾ ಮಿತ್ರತ್ವ ಜರಗಿತು.
ಸಮಾರಂಭವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಉದ್ಘಾಟಿಸಿದರು. ಮಂಜೇಶ್ವರ ಬಿ ಆರ್ ಸಿ.ಯ. ಕ್ಲಸ್ಟರ್ ಸಂಯೋಜಕ ಬಿಜೇಶ್ ಹಾಗೂ ತಿಲಕ ಶುಭಾಶಂಸನೆ ನೀಡಿದರು. ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಶಿಕ್ಷಕ ರಿಯಾಸ್ ವಾಚನಾ ಮಿತ್ರತ್ವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಬಳಿಕ ಶಿಕ್ಷಕರಾದ ಸುಹೇಶ್, ಹಾಗೂ ರೆಹಮತ್ ತರಬೇತಿ ನಡೆಸಿಕೊಟ್ಟರು. ಮಕ್ಕಳ ಹಾಗೂ ರಕ್ಷಕರ ಹಸ್ತಪ್ರತಿಯನ್ನು ಎಸ್ ಎಂ ಸಿ ಸದಸ್ಯ ಮೋಹನ ಅವರು ಬಿಡುಗಡೆಗೊಳಿಸಿದರು. ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಅಪ್ಸಾ ವಂದಿಸಿದರು. ಅಬ್ದುಲ್ ಬಶೀರ್ ಕಾರ್ಯಕ್ರಮ ನಿರ್ವಹಿಸಿದರು.




.jpg)
