ಬದಿಯಡ್ಕ: ವೇದಾಧ್ಯಯನವು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದ್ದು, ಆತನ ವ್ಯಕ್ತಿತ್ವದ ವಿಕಾಸಕ್ಕೆ ಸಹಕಾರಿಯಾಗುವುದಲ್ಲದೆ ಪ್ರಕೃತಿಯಲ್ಲಿ ಧನಾತ್ಮಕ ಚಿಂತನೆಗಳು ಮೂಡಿಬರುವುದಕ್ಕೂ ಕಾರಣವಾಗಿದೆ. ಎಳವೆಯಲ್ಲಿಯೇ ಅಧ್ಯಯನ ಮಾಡುವುದರಿಂದ ಬುದ್ದಿಶಕ್ತಿಯ ವಿಕಾಸಕ್ಕೂ ಸಹಕಾರಿಯಾಗಿದೆ. ವೇದದಲ್ಲಿ ಎಲ್ಲವೂ ಅಡಗಿದೆ ಎಂದು ನಿವೃತ್ತ ಮಖ್ಯೋಪಾಧ್ಯಾಯ, ಗುರಿಕ್ಕಾರ ಪೆರ್ಮುಖ ಈಶ್ವರ ಭÀಟ್ ಅಭಿಪ್ರಾಯಪಟ್ಟರು.
ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಎರಡು ತಿಂಗಳ ವಸಂತ ವೇದ ಪಾಠ ಶಾಲೆಗೆ ದೀಪಬೆಳಗಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂಬಲ್ತಿಮಾರು ವೆಂಕಟ್ರಮಣ ಭಟ್ ಮಾತನಾಡಿ ಹಿತವಚನವನ್ನು ನೀಡಿದರು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ವೇದವನ್ನು ಉಳಿಸಬೇಕಾದರೆ ಬಾಲ್ಯದಿಂದಲೇ ವೇದಾಧ್ಯಯನವನ್ನು ಮಾಡಬೇಕು ಅಲ್ಲದೆ ತಮ್ಮ ಅನುಷ್ಠಾನಗಳಲ್ಲಿ ವೇದಗಳನ್ನು ರೂಢಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳಗುವುದು ಸಾಧ್ಯ ಎಂದರು. ಕೋಶಾಧಿಕಾರಿ ವೈ.ಕೆ.ಗೋವಿಂದ ಭಟ್ ಏತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ಸ್ವಾಗತಿಸಿ, ಬಿಎಸ್‍ಎನ್‍ಎಲ್ ನಿವೃತ್ತ ಅಧಿಕಾರಿ ಗೋವಿಂದ ಭಟ್ ಎಡನೀರು ವಂದಿಸಿದರು. ವೇದಮೂರ್ತಿ ಶಿವರಾಮ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಮಹಾಗಣಪತಿ ಶರ್ಮ ಅಳಕ್ಕೆ, ಮುರಳೀಧರ ಶರ್ಮ ಅಳಕ್ಕೆ, ಕೃಷ್ಣರಾಜ್ ಭಟ್ ನಿಡುಗಳ ಹಾಗೂ ಸಂಸ್ಕøತ ಅಧ್ಯಾಪಕರಾಗಿ ಗೋವಿಂದ ಭಟ್ ಎಡನೀರು ವಿದ್ಯಾರ್ಥಿಗಳಿಗೆ ವೇದಪಾಠವನ್ನು ಮಾಡಲಿದ್ದಾರೆ. ಮೇ ತಿಂಗಳ ಅಂತ್ಯದ ವೇಳೆ ಶಿಬಿರ ಸಮಾರೋಪಗೊಳ್ಳಲಿದೆ.




.jpg)
.jpg)
