ಕಾಸರಗೋಡು: ಬಾಡಿಗೆ ಸಹಿತ ಇತರ ವೆಚ್ಚಗಳೂ ಸೇರಿ 2.38 ಕೋಟಿ ರೂಪಾಯಿ ಬಾಕಿ ಇದೆ ಎಂದು ಆರೋಪಿಸಿ ಪಡನ್ನಕ್ಕಾಡ್ ನ ಕಟ್ಟಡ ಮಾಲೀಕರು ಕೇಂದ್ರೀಯ ವಿಶ್ವವಿದ್ಯಾಲಯದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹೊಸದುರ್ಗ ಉಪ ನ್ಯಾಯಾಲಯ ತಿರಸ್ಕರಿಸಿದೆ.
ಈ ಸಂಬಂಧ ಹಲವು ದಾಖಲೆಗಳನ್ನು ಸಲ್ಲಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯ, ಕಟ್ಟಡ ಮಾಲೀಕರ ಹಕ್ಕು ಸರಿಯಲ್ಲ ಎಂದು ವಾದಿಸಿದೆ. ಕಟ್ಟಡ ಮಾಲೀಕರ ಮಗಳ ಅರ್ಜಿಯನ್ನು ತಿರಸ್ಕರಿಸಿದ ಉಪ ನ್ಯಾಯಾಧೀಶ ಎಂ.ಸಿ.ಆಂಟನಿ ನ್ಯಾಯಾಲಯದ ವೆಚ್ಚವನ್ನು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೀಡಬೇಕು ಎಂದು ಆದೇಶಿಸಿದರು.
ಪೆರಿಯದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯ ಕೇಂದ್ರ ಕಛೇರಿಯನ್ನು ವಿಸ್ತರಿಸುವ ಮೊದಲು ಪಡನ್ನಕ್ಕಾಡ್ ನ ಕಟ್ಟಡವನ್ನು ಎಂಟು ವರ್ಷಗಳ ಕಾಲ ಬಾಡಿಗೆಗೆ ನೀಡಲಾಗಿತ್ತು. ಅಂದರೆ ಆಗಸ್ಟ್ 2010 ರಿಂದ ಸೆಪ್ಟೆಂಬರ್ 2018 ರವರೆಗೆ ಈ ಬಾಡಿಗೆ ವ್ಯವಸ್ಥೆ ಜಾರಿಯಲ್ಲಿತ್ತು.
ತಿಂಗಳಿಗೆ 6,19,063 ರೂ. ಮಾಸಿಕ ಬಾಡಿಗೆ ನಿಗದಿಯಾಗಿತ್ತು. ಮೂರು ಅ|ಂತಸ್ತಿನ ಕಟ್ಟಡಕ್ಕೆ ಸೆಂಟ್ರಲ್ ಯೂನಿವರ್ಸಿಟಿ ಪ್ರಕಾರ 58,000 ಚದರ ಅಡಿ ವಿಸ್ತೀರ್ಣದ ಮಾತ್ರವಿದೆ. ಆದರಿ ಕಟ್ಟಡ ಮಾಲಿಕರು 68 ಚದರ ಅಡಿ ವಿಸ್ತೀರ್ಣದ ಬಾಡಿಗೆ ಸ್ವೀಕರಿಸುತ್ತಾರೆ ಎಂದು ವಿವಿ ಪರಿಶೋಧನಾ ತಂಡ ಪತ್ತೆಮಾಡಿತು. ಆ ಬಳಿಕ ಬಾಡಿಗೆ ನೀಡುವುದನ್ನು ವಿವಿ ನಿಲ್ಲಿಸಿತು.
ಈ ಮಧ್ಯೆ 2016 ಮಾರ್ಚ್ ತಿಂಗಳ ಬಳಿಕ ಬಾಡಿಗೆ ಬಂದಿಲ್ಲ ಎಂದು ಆರೋಪಿಸಿ ಕಟ್ಟಡ ಮಾಲಿಕರ ಪರವಾಗಿ ಕಾಸಿಂ ಸೇರಿದಂತೆ ಹತ್ತು ಮಂದಿ ತೃಕ್ಕರಿಪುರದ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಬಾಡಿಗೆ ಬಾಕಿ 1,98,10,016 ರೂ., ಬಾಡಿಗೆ ಬಡ್ಡಿ ಸಹಿತ ಕಟ್ಟಡ ಹಾನಿಗೊಳಿಸಿದ್ದರ ಭಾಗವಾಗಿ 40 ಲಕ್ಷ ರೂ. ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದರು. 2010 ರಿಂದ ಪಾವತಿಸಿದ ಮಾಸಿಕ ಬಾಡಿಗೆ ಹಣದಲ್ಲಿ ಹೆಚ್ಚುವರಿಯಾಗಿ 87.61 ಲಕ್ಷ ಪಾವತಿಯಾಗಿದ್ದು ಅರ್ಜಿದಾರರು ಅಪೇಕ್ಷಿಸಿದ್ದ ಎಲ್ಲಾ ಮೊತ್ತವೂ ಇದರಲ್ಲಿ ಸೇರುತ್ತದೆ ಎ|ಂದು ಕೇಂದ್ರೀಯ ವಿವಿಯ ಪರವಾಗಿ ನ್ಯಾಯವಾದಿ ಕೆ.ಶ್ರೀಕಾಂತ್ ನ್ಯಾಯಾಲಯದಲ್ಲಿ ವಾದಿಸಿದ್ದರು.
ಸಿಬಿಐ ವರದಿಯೂ ನ್ಯಾಯಾಲಯಕ್ಕೆ ಸಾಕ್ಷ್ಯ:
*ಕಟ್ಟಡ ಮಾಲೀಕರು ಹೆಚ್ಚುವರಿ ಬಾಡಿಗೆ ವಸೂಲಿ ಮಾಡಿರುವರೆಂಬ ಪ್ರಕರಣದಲ್ಲಿ ಈ ಹಿಂದೆ ಸಿಬಿಐ ತನಿಖೆ ನಡೆಸಿತ್ತು. ಕಟ್ಟಡದ ಎರಡು, ಮೂರನೇ ಅಂತಸ್ತುಗಳ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕೇಂದ್ರೀಯ ವಿವಿ ತರಗತಿಗಳನ್ನು ಆರಂಭಿಸಿತ್ತು.
ಮೂರೂ ಅಂತಸ್ತುಗಳ ಕಾಮಗಾರಿ ಪೂರ್ತಿಯಾದರೂ ಪೂರ್ವ ಕರಾರು ಪ್ರಕಾರ ನಿಗದಿಯಾದ ಬಾಡಿಗೆ ದರ 6.19 ಲಕ್ಷ ರೂ. ಕ|ಏಂದ್ರ ವಿವಿ ಯಿಂದ ವಸೂಲುಮಾಡಲಾಗಿದೆ. ಈ ಮುಂತಾದ ವಿಚಾರಗಳ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು.
ತನಿಖಾಧಿಕಾರಿಗಳು ಸಿಬಿಐಯ ವರದಿಯನ್ನು ಸಿಬಿಐಯ ನ್ಯಾಯಾಲಯದಲ್ಲಿ ಸಮರ್ಪಿಸಿದ್ದರು. ಇದೇ ಸಿಬಿಐ ತನಿಖಾ ವರದಿಯನ್ನು ಹೊಸದುರ್ಗದ ನ್ಯಾಯಾಲಯದ ತನಿಖೆಯ ವೇಳೆ ಸಮರ್ಪಿಸಲಾಗಿತ್ತು.





