ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಚರ್ಚಿಸಿದ್ದು, ಪರಿಸ್ಥಿತಿಯನ್ನು ರಷ್ಯಾ-ಉಕ್ರೇನ್ ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳುವುದರ ಪರವಾಗಿ ಮಾತನಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಮೋದಿ-ಜಾನ್ಸನ್ ದ್ವಿಪಕ್ಷೀಯ ಮಾತುಕತೆಯ ಬಗ್ಗೆ ವರದಿಗಾರರಿಗೆ ಮಾಹಿತಿ ನೀಡಿರುವ ಶ್ರಿಂಗ್ಲಾ, ರಷ್ಯಾ ನಿರ್ಬಂಧದ ವಿಚಾರವಾಗಿ ಬ್ರಿಟನ್ ಕಡೆಯಿಂದ ಯಾವುದೇ ಒತ್ತಡವೂ ಇರಲಿಲ್ಲ. ಬೋರಿಸ್ ಜಾನ್ಸನ್ ಉಕ್ರೇನ್ ವಿಷಯವಾಗಿ ತಮ್ಮ ನಿಲುವನ್ನು ಭಾರತದೊಂದಿಗೆ ಹಂಚಿಕೊಂಡರು ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ವೇಳೆ ಉಕ್ರೇನ್ ವಿಷಯವಾಗಿ ಭಾರತದ ನಿಲುವನ್ನೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದು, ಭಾರತ ಶಾಂತಿಯ ಪರವಾಗಿದೆ, ಅಲ್ಲಿನ ಸಂಘರ್ಷ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ಮಾತುಕತೆ ಮೂಲಕ ಶೀಘ್ರವೆ ಬಗೆಹರಿಯಬೇಕು ಎಂದು ಹೇಳಿದ್ದಾರೆ.
ಉಕ್ರೇನ್ ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೋದಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

.jpg)
