HEALTH TIPS

ರಾಜ್ಯ ಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ನಾಳೆ ಕೊಂಡೆವೂರಿಗೆ: ಶಿಲಾನ್ಯಾಸ ಕಾರ್ಯಕ್ರಮ

            ಉಪ್ಪಳ: ಮೀಂಜ ಗ್ರಾ.ಪಂ.ಯ ಮುಡಿಮೊಗರು-ಕನ್ಯಾನ-ಕುಳೂರು ರಸ್ತೆಯ ಅಭಿವೃದ್ದಿಗಾಗಿ ರಾಜ್ಯ ಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ಅವರು ಸುಮಾರು ಎರಡು ಕೋಟಿ ನಲ್ವತ್ತೆರಡು ಲಕ್ಷದ ಬೃಹತ್ ಮೊತ್ತ ಬಿಡುಗಡೆಮಾಡುವ ಮೂಲಕ ಗ್ರಾಮೀಣ ಅಭಿವೃದ್ದಿಗೆ ಭಾಷ್ಯ ಬರೆದಿದ್ದು, ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮ ನಾಳೆ(ಏ.14) ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ನೇತೃತ್ವದಲ್ಲಿ ಡಾ.ಸುಬ್ರಹ್ಮಣ್ಯ ಸ್ವಾಮಿ ನೆರವೇರಿಸುವರು.

        ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಬೆಳಿಗ್ಗೆ 9.45 ಕ್ಕೆ ನಡೆಯುವ ಸಮಾರಂಭದಲ್ಲಿ ಕೊಂಡೆವೂರು ಶ್ರೀಗಳು ಆಶೀರ್ವಚನ ನೀಡುವರು. ಡಾ.ಸುಬ್ರಹ್ಮಣ್ಯ ಸ್ವಾಮಿ ಆಶೀರ್ವಚನ ನೀಡುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ರ|ಆಜ್ಯ ಸಭಾ| ಸದಸ್ಯ ಕೆ.ನಾರಾಯಣ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ವಿರಾಟ್ ಹಿಂದೂಸ್ಥಾನ್ ಸಂಗಮದ ಪ್ರಧಾನ ಕಾರ್ಯದರ್ಶಿ ಜಗದೀಶ ವಿ.ಶೆಟ್ಟಿ ಬಂಬ್ರಾಣ ಪೂಕೆರೆ ಮುಖ್ಯ ಅತಿಥಿಗಳಾಗಿರುವರು. ಮೀಂಜ ಗ್ರಾ.ಪಂ.ಅ|ಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಮಂಗಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ರಿಶ|ಆನ ಸಾಜಿರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಮೀಂಜ ಗ್ರಾ.ಪಂ. ಸದಸ್ಯ ಜನಾರ್ದನ, ಕುಳೂರು-ಕನ್ಯಾನ-ಮುಡಿಮೊಗರು ಸಂಪರ್ಕ ರಸ್ಥೆ ಸಮಿತಿ ಅ|ಧ್ಯಕ್ಷ ದಿನೇಶ್ ಬುಡಾಲೆ ಉಪಸ್ಥಿತರಿರುವರು. 


S|

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries