ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕಾಸರಗೋಡು ಪೆರಿಯ ಕ್ಯಾಂಪಸ್ ವಿದ್ಯಾರ್ಥಿಗಳು ಗ್ರಾಮ ಜೀವನ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ಶಿಬಿರ ದೇಲಂಪಾಡಿ ಪಂಚಾಯಿತಿಯ ವೆಳ್ಳರಿಕಾಯ ಆದಿವಾಸಿ ಕಾಲೋನಿಯಲ್ಲಿ ಜರುಗಿತು. ಉದುಮ ಶಾಸಕಸಿ.ಎಚ್.ಕುಂಜಾಂಬು ಉದ್ಘಾಟಿಸಿದರು.
ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಪ್ರಕೃತಿ ಗ್ರಾಮೀಣ ಗೋತ್ರ ಹಾಗೂ ದೇಲಂಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಶಿಬಿರ ವಿದ್ಯಾರ್ಥಿಗಳಿಗೆ ಹೊಸ ಜೀವನ ಪಾಠವನ್ನು ಒದಗಿಸಿತು.
ಕಾಲನಿಯಲ್ಲಿನ ಅಭಿವೃದ್ಧಿಪರ ಸಮಸ್ಯೆಗಳು, ಸರ್ಕಾರ ಮತ್ತು ಎನ್‍ಜಿಒಗಳ ಪಾಲ್ಗೊಳ್ಳುವಿಕೆ ಮತ್ತು ತಳಮಟ್ಟದವರಿಗೆ ಸಹಾಯವನ್ನು ಸುವ್ಯವಸ್ಥಿತಗೊಳಿಸುವ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಿದರು. ಕಾಲೋನಿಯಲ್ಲಿ 17 ಮನೆಗಳಿದ್ದು, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿನ ಹಿಂದುಳಿದಿರುವಿಕೆಯನ್ನು ವಿದ್ಯಾರ್ಥಿಗಳು ಪಟ್ಟಿಮಾಡಿಕೊಂಡರು. ಕುಟ್ಟಿಪ್ಪಾರ ಜಿಎಲ್‍ಪಿ ಶಾಲಾ ವಠಾರದಲ್ಲಿ ಮೆರವಣಿಗೆಯೊಂದಿಗೆ ಆರಂಭಗೊಂಡ ಶಿಬಿರದಲ್ಲಿ ಊರ ಪ್ರಮುಖ ರಾಮನ್ ಅವರ ನೇತೃತ್ವದಲ್ಲಿ ಕಾಲನಿವಾಸಿಗಳ ಸಹಾಯದಿಂದ 'ಗ್ರಾಮ ನಕ್ಷೆ'ತಯಾರಿಸಲಾಯಿತು. ಕಾಲನಿಯಲ್ಲಿನ ಮನೆಗಳು, ನೈಸರ್ಗಿಕ ಮತ್ತು ಕೃತಕ ಸಂಪನ್ಮೂಲಗಳ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ. ಕಾಲನಿಯಲ್ಲಿನ ಮನೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವಾಸ್ತವ್ಯ ಹೂಡುವ ಮೂಲಕ ಅಲ್ಲಿನ ವಿದ್ಯಾರ್ಥಿಗಳ ಜೀವನ ಪರಿಸ್ಥಿತಿಗಳನ್ನು ಸಹ ತಿಳಿದುಕೊಂಡರು. ಕಾಲನಿಯಲ್ಲಿನ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಯಿತು. ಕುಟುಂಬಶ್ರೀ ಸದಸ್ಯರು ಮತ್ತು ಪ್ರವರ್ತಕರೊಂದಿಗೆ ಸಮಾಲೋಚಿಸಿ ಕಾಲನಿಯಲ್ಲಿನ ಪರಿಸ್ಥಿತಿ ಕುರಿತು ವರದಿ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ಸಾಮಾಜಿಕ ಕಾರ್ಯ ವಿಭಾಗದ ಮುಖ್ಯಸ್ಥ ಪೆÇ್ರ.ಎ.ಕೆ. ಮೋಹನ್ ಮತ್ತು ಶಿಕ್ಷಕ ಕೆ.ರಮಾನಂದ್ ನೇತೃತ್ವದಲ್ಲಿ ಶಿಬಿರ ನಡೆಯಿತು. ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಕೀಲೆ ಎ.ಪಿ ಉಷಾ, ಉಪಾಧ್ಯಕ್ಷ ಅಬ್ದುಲ್ಲಕುಞÂ, ಜಿ.ಎಲ್.ಪಿಎಸ್ ಮುಖ್ಯಶಿಕ್ಷಕಿ ಅಲ್ಫೋನ್ಸಾ ಡೊಮಿನಿಕ್ ಉಪಸ್ಥಿತರಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಮತ್ತು ಕುಲಸಚಿವ ಡಾ.ಎನ್. ಸಂತೋಷ್ ಕುಮಾರ್ ಶಿಬಿರಕ್ಕೆ ಭೇಟಿ ನೀಡಿದರು.





