ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂದು ನಟ ಹಾಗೂ ವಿಮಲ್ ಗುಟ್ಕಾ ಪಾನ್ ಮಸಲಾ ಜಾಹೀರಾತಿನ ರಾಯಭಾರಿ ಅಜಯ್ ದೇವಗನ್ ಹೇಳಿರುವುದು ಪರ ವಿರೋಧದ ಚರ್ಚೆ ಮುಂದುವರೆಸಿದೆ.
0
samarasasudhi
ಏಪ್ರಿಲ್ 30, 2022
ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂದು ನಟ ಹಾಗೂ ವಿಮಲ್ ಗುಟ್ಕಾ ಪಾನ್ ಮಸಲಾ ಜಾಹೀರಾತಿನ ರಾಯಭಾರಿ ಅಜಯ್ ದೇವಗನ್ ಹೇಳಿರುವುದು ಪರ ವಿರೋಧದ ಚರ್ಚೆ ಮುಂದುವರೆಸಿದೆ.
'ಹೆತ್ತ ತಾಯಿಗೆ..ಹೊತ್ತ ಮಣ್ಣಿಗೆ..ಜೀವ ಕೊಟ್ಟ ನೆಲದ ಬೇರಿಗೆ ..ನಮ್ಮೊಳಗೆ ಹರಿಯುವ ಜೀವ ನದಿ ಕನ್ನಡಕ್ಕೇ.. ದ್ರೋಹ ಬಗೆಯಲು ನಾಚಿಕೆಯಾಗಲ್ವೆ .. ಛೀ' ಎಂದು ಸಚಿವ ಅಶ್ವತ್ಥ್ ನಾರಾಯಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಸಂಸದ ರಮೇಶ್ ಜಿಗಜಿಣಗಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರಿಗೆ ಛೀಮಾರಿ ಹಾಕಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ 'ಹಿಂದಿ ಅದೇನೂ ರಾಷ್ಟ್ರಭಾಷೆ ಅಲ್ಲ' ಎಂದು ಹೇಳಿದ್ದರು. ಇದಕ್ಕೆ ಕುಪಿತಗೊಂಡು ಟ್ವೀಟ್ ಮಾಡಿದ್ದ ಅಜಯ್ ದೇವಗನ್, 'ಹಿಂದಿ ರಾಷ್ಟ್ರಭಾಷೆ ಅಲ್ಲವೆಂದರೆ ನೀವೆಕೆ ನಿಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಾ? ಹಿಂದಿ ಎಂದೆಂದಿಗೂ ರಾಷ್ಟ್ರಭಾಷೆ' ಎಂದು ಹೇಳಿದ್ದರು.
ಅಜಯ್ ದೇವಗನ್ ಅವರ ಈ ಹೇಳಿಕೆಯನ್ನು ವಿರೋಧಿಸಿ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲೆಯಾಳಿಗರು ಹೇಳಿಕೆ ನೀಡಿದ್ದರು. ಕೆಲವರು ಸಮರ್ಥಿಸಿಕೊಂಡಿದ್ದರು.