ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ವತಿಯಿಂದ ಹಾಲಿ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುವ ಕೆ.ಪಿ.ಎಸ್,.ಟಿ.ಎ ಸದಸ್ಯರಿಗೆ ವಿದಾಯಕೂಟ ಕಾರ್ಯಕ್ರಮ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜರಗಿತು.
ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಜನಪ್ರತಿನಿಧಿ ಅನುಸೂಯ ಮಾನ್ಯ ಮಾತನಾಡಿ ನಿವೃತ್ತರಾಗುವ ಅಧ್ಯಾಪಕರು ಮುಂದೆ ಅತ್ಯಂತ ಇತಿಹಾಸವಿರುವ ಮಾತೃಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆನಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು. ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಮಾಸ್ತರ್, ರಾಧಾಕೃಷ್ಣನ್,ಯೂಸುಫ್ ಮಾಸ್ತರ್, ಗಂಗಾಧರ ಶೆಟ್ಟಿ, ಶರತ್ ಚಂದ್ರ ಶೆಟ್ಟಿ, ರಾಮಕೃಷ್ಣ ಮಾಸ್ತರ್, ಶುಭಾಶಂಸನೆಗೈದರು. ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಸಂಘಟನೆಯ ಸದಸ್ಯರಾದ ಬೇಬಿ, ಸಬಿತಾ ಟೀಚರ್, ಗಣೇಶ್ ಕುಮಾರ್ ಕಾಟುಕುಕ್ಕೆ, ಪ್ರಭಾಕರನ್ ಮಾಸ್ತರ್, ಸಂಘಟನೆಯ ಮಾಜಿ ರಾಜ್ಯ ಸಮಿತಿ ಸದಸ್ಯ ದಾಮೋದರ ಮಾಸ್ತರ್, ಮಾಜಿ ಜಿಲ್ಲಾಧ್ಯಕ್ಷ ರಾಜೀವನ್ ಮಾಸ್ತರ್ ಇವರಿಗೆ ಶಾಲು ,ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಕೋಶಾಧಿಕಾರಿ ಮಲ್ಲಿಕಾ ಟೀಚರ್ ವಂದಿಸಿದರು.





