ಉಪ್ಪಳ : ಸುವರ್ಣ ಸಂಭ್ರಮ ಆಚರಿಸುತ್ತಿರುವ ಅರ್ಥದಾರಿ ಹರೀಶ ಬಳಂತಿಮೊಗರು ಅವರೊಂದಿಗಿನ ವಿಶೇಷ ವೈಚಾರಿಕ ಸಂದರ್ಶನವನ್ನೊಳಗೊಂಡ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ನೂತನ ಸಂಚಿಕೆಯನ್ನು ಕೊಂಡೆವೂರಿನಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಸಂಚಿಕೆಯನ್ನು ಪ್ರಶಂಸಿಸಿದ ಅವರು "ಒಬ್ಬರು ಸಾಧಕರನ್ನು ಮತ್ತೊಬ್ಬರು ಸಾಧಕರು ಮುಕ್ತವಾಗಿ ಪ್ರಶಂಸಿಸುವುದು ಮತ್ತು ಅವರ ವೈಚಾರಿಕ ಚಿಂತನೆಗಳಿಗೆ ಧ್ವನಿಯಾಗಿ ಅದನ್ನು ದಾಖಲಿಸುವುದು ಅಪರೂಪ. 'ಕಣಿಪುರ' ಮಾಸಿಕ ಈ ಕೆಲಸವನ್ನು ಮಾಡುತ್ತಲೇ ಕಾಲಕ್ಕೆ ಕನ್ನಡಿಯಾಗಿದೆ ಎಂದರು.
ಸಂಚಿಕೆಯ ಪ್ರತಿಯನ್ನು ಕಲಾವಿದ ಹರೀಶ ಬೊಳಂತಿಮೊಗರು ಅವರಿಗೆ ನೀಡಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಇತ್ತೀಚಿಗೆ ಹರೀಶರ ಸುವರ್ಣ ಸಂಭ್ರಮಾಚರಣೆಯನ್ನು ಸಪ್ತಾಹದ ಮೂಲಕ ಆಚರಿಸಿದ ಯಕ್ಷಮೌಕ್ತಿಕ ಮಂಗಲ್ಪಾಡಿ ಇದರ ಸದಸ್ಯೆಯರಾದ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ, ಜಯಲಕ್ಷ್ಮಿ ಮಯ್ಯ, ಸುಲೋಚನ ನಾವಡ, ಸರಸ್ವತಿ ಹೊಳ್ಳ, ಶ್ರೀಲತಾ ನಾವಡ ಮತ್ತು ಸಾಮಾಜಿಕ ಮುಖಂಡ ವಿ. ಬಾಲಕೃಷ್ಣ ಶೆಟ್ಟಿ, ಕಣಿಪುರ ಪ್ರಧಾನ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಉಪಸ್ಥಿತರಿದ್ದರು.
ಕನ್ನಡ ಸಾಂಸ್ಕøತಿಕ-ಸಾಹಿತ್ತಿಕ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಕಳೆದ ಹತ್ತು ವರ್ಷಗಳಿಂದ ಗಡಿನಾಡು ಕಾಸರಗೋಡಿನಿಂದ ಪ್ರಕಟವಾಗುತಿರುವ "ಕಣಿಪುರ ಮಾಸ ಪತ್ರಿಕೆ ಉಂಟುಮಾಡಿರುವ ಸಂಚಲನ ಗಮನ ಸೆಳೆಯುತ್ತಿದೆ. ಏಕ ವ್ಯಕ್ತಿ ಸಾಧನೆಯಾಗಿ ಹೊರಹೊಮ್ಮಿರುವ ಇಂತಹ ಪ್ರಕಟಣೆ ಕನ್ನಡ ಪತ್ರಿಕೋದ್ಯಮ ಕ್ಷೇತ್ರದ ನವೀನ ಸಾಧನೆ ಎನ್ನಲು ಅಡ್ಡಿಯಿಲ್ಲ. ಸಂಕೀರ್ಣ ಪರಿಸ್ಥಿತಿಯ ಈಗಿನ ಕಾಲಘಟ್ಟದಲ್ಲಿ ಸಾಂಸ್ಕøತಿಕ ವಾಸನೆ ಪಸರಿಸುವಲ್ಲಿ ಕಣಿಪುರದ ನಾಗಾಲೋಟ ಗಡಿನಾಡಿಗೆ ಹೆಮ್ಮೆ ತಂದಿದೆ.




.jpg)
.jpg)
