ಕಾಸರಗೋಡು: ಹತ್ತನೇ ತರಗತಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ 2020-21 ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಮೀನುಗಾರರ ಅಭಿವೃದ್ಧಿ ಮತ್ತು ಕಲ್ಯಾಣ ಸಹಕಾರ ಸಂಘಗಳ ಸದಸ್ಯರಾದ ಮೀನುಗಾರರ ಮಕ್ಕಳಿಗೆ ಶಿಕ್ಷಣ ಪ್ರಶಸ್ತಿ ಮತ್ತು ಸ್ಮರಣಿಕೆ ನೀಡುವ ಕಾರ್ಯಕ್ರಮಮ ಜರುಗಿತು. ಕಾರ್ಯಖ್ರಮದ ಅಂಗವಾಗಿ ಜಿಲ್ಲೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ-ಪ್ಲಸ್ ಪಡೆದ 31 ವಿದ್ಯಾರ್ಥಿಗಳಿಗೆ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ-ಪ್ಲಸ್ ಪಡೆದ 5 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಞಂಗಾಡ್ ಮಹಾಕವಿ ಪಿ ಸ್ಮಾರಕ ಭವನದಲ್ಲಿ ನಡೆದ ಸಮಾರಂಭವನ್ನು ಮತ್ಸ್ಯಫೆಡ್ ಅಧ್ಯಕ್ಷ ಟಿ ಮನೋಹರನ್ ಉದ್ಘಾಟಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಕೆ.ವಿ.ಮಾಯಾಕುಮಾರಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಮತ್ಸ್ಯಫೆಡ್ ಆಡಳಿತ ಮಂಡಳಿ ಸದಸ್ಯರಾದ ಕಟಾಡಿ ಕುಮಾರನ್, ಕುಲಂಗರ ರಾಮನ್, ಆರ್.ಗಂಗಾಧರನ್, ಸುರೇಂದ್ರನ್ ಪೂಂಜಾವಿ, ವಿ.ವಿ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಶರೀಫ್ ಸ್ವಾಗತಿಸಿ, ಯೋಜನಾಧಿಕಾರಿ ಹರ್ಷಕೃಷ್ಣ ವಂದಿಸಿದರು.


