ನವದೆಹಲಿ: ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೊಬೈಲ್ ನಿಂದ ಹೊಗೆ, ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ.
ದಿಬ್ರುಗರ್-ದೆಹಲಿ ಮಾರ್ಗದ ಇಂಡಿಗೋ ವಿಮಾನದಲ್ಲಿ ಈ ಅವಘಡ ಸಂಭವಿಸಿದ್ದು, ಪ್ರಯಾಣಿಕರಲ್ಲಿ ಕೆಲವು ಕಾಲ ಆತಂಕ ಮೂಡಿತ್ತು ಎಂದು ಡಿಜಿಸಿಎ ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿಯನ್ನು ಕ್ಯಾಬಿನ್ ಸಿಬ್ಬಂದಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ. ನಂತರ ದೆಹಲಿಯ ಏರ್ ಪೋರ್ಟ್ ಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಡಿಜಿಸಿಎ ಅಧಿಕಾರಿಗಳು ಎಎನ್ಐ ಗೆ ತಿಳಿಸಿದ್ದಾರೆ.

