ಕಾಸರಗೋಡು: ಕರ್ನಾಟಕದಿಂದ ಹಾಗು ಕಾಸರಗೋಡು ಜಿಲ್ಲೆಯ ಹೊರಗಿನಿಂದ ಕಾಸರಗೋಡು ಪ್ರದೇಶಕ್ಕೆ ಸಾಹಿತ್ತಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹಾಗು ಇಲ್ಲಿನ ಸಾಹಿತ್ಯ ಮತ್ತು ಸಂಸ್ಕøತಿಯ ಅಧ್ಯಯನಕ್ಕೆ ಬರುವ, ಚಾರಿತ್ರಿಕ ಸ್ಮಾರಕಗಳ, ಸಾಹಿತ್ಯ ಹಾಗು ಕನ್ನಡ ಹೋರಾಟಗಾರರ ಬಗ್ಗೆ ಅಧ್ಯಯನ, ವೀಕ್ಷಣೆ ಮಾಡಲು ಬರುವ ಸಾಂಸ್ಕøತಿಕ, ಸಾಹಿತ್ತಿಕ ರಾಯಬಾರಿಗಳಿಗೆ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಉಚಿತ ವಸತಿ ಸೌಕರ್ಯ ಒದಗಿಸಲು ತೀರ್ಮಾನಿಸಿದೆ.
ಒಂದು ವಾರದ ಮುಂಚಿತವಾಗಿ ಕನ್ನಡ ಭವನದ ಸ್ಥಾಪಕಾಧ್ಯಕ್ಷರಾದ ಕೆ.ವಾಮನ ರಾವ್ ಬೇಕಲ್ (ದೂರವಾಣಿ ಸಂಖ್ಯೆ : 9633073400) ಅವರಿಗೆ ಸಂಪರ್ಕಿಸಿ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಉಚಿತ ವಸತಿ ಸೌಕರ್ಯವು ಎರಡು ದಿನಗಳ ಮಟ್ಟಿಗೆ ಸೀಮಿತವಾಗಿದೆ ಎಂದು ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


