HEALTH TIPS

ಎಲ್ಲಾ ಶಾಲೆಗಳಲ್ಲೂ ದೈಹಿಕ ಶಿಕ್ಷಕರನ್ನು ನೇಮಿಸಬೇಕು: ಶಾರೀರಿಕ ಶಿಕ್ಷಕ ಸಂಘಟನೆ

             ಮುಳ್ಳೇರಿಯ:  ದೈಹಿಕ ಶಿಕ್ಷಕ ಸಂಘಟನೆಯ  ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಮ್ಮೇಳನ ಬುಧವಾರ ಕಾಞಂಗಾಡ್ ರೋಟರಿ ಸಭಾಂಗಣದಲ್ಲಿ ನಡೆಯಿತು.  

               ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೆಗೆ ತೆಗೆಯದೆ ಆರೋಗ್ಯ ಶಿಕ್ಷಣದ ಮಹತ್ವವನ್ನು ಅರಿತು ಎಲ್ಲ ಶಾಲೆಗಳಲ್ಲೂ ದೈಹಿಕ ಶಿಕ್ಷಕರನ್ನು ನೇಮಿಸಬೇಕೆಂದು ಸಂಯುಕ್ತ ಶಾರೀರಿಕ ಸಂಘಟನೆಯ ಜಿಲ್ಲಾ ಸಮ್ಮೇಳನ ಸರ್ಕಾರವನ್ನು ಒತ್ತಾಯಿಸಿದೆ. 

               ಮಾಜಿ ಸಚಿವ ಹಾಲಿ ಶಾಸಕ ಇ. ಚಂದ್ರಶೇಖರನ್ ಸಮ್ಮೇಳನವನ್ನು ಉದ್ಘಾಟಿಸಿದರು.ಎಳವೆಯಲ್ಲಿಯೇ ಶಾರೀರಿಕ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಅಳವಡಿಸಿದರೆ ರೋಗ ಮುಕ್ತ ಸಮಾಜವನ್ನಾಗಿ ಮಾಡಬಹುದೆಂದು ಶಾಸಕರು  ತಿಳಿಸಿದರು. ಕೆ. ವಿಜಯಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಬಾಲಕೃಷ್ಣ ಶೆಟ್ಟಿ,  ಅನಿತಾ, ಪ್ರೀತಿ  ಶುಭಾಶಂಸನೆಗೈದರು. ಸೇವೆಯಿಂದ ನಿವೃತ್ತರಾಗಲಿರುವ ಪಿ. ಪಿ ಅಶೋಕನ್, ಬಿ. ಎಂ. ಬಶೀರ್ ಅಹ್ಮದ್, ಗ್ಲಾನ್ಸಿ ಅಲೆಕ್ಸ್, ರಾಜು, ಸಿಬಲ್ ಟಿ.ಟಿ ಅವರನ್ನು ಶಾಸಕರು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರತಿನಿಧಿ ಸಮ್ಮೇಳನವನ್ನು ಮಾಜಿ ರಾಜ್ಯ ನೇತಾರ  ಅಶೋಕನ್ ಧರ್ಮತ್ತಡ್ಕ ಉದ್ಘಾಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಬಿಜು, ಮಧುಸೂದನನ್ ಕೆ, ಶ್ಯಾಮ್ ಕೃಷ್ಣ ಪ್ರಸಾದ್, ಸಂತೋಷ್ ಪಿ.ಎಚ್  ಮೊದಲಾದವರು ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries