ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎನ್.ಸಿ.ಸಿ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಜರಗಿತು.
ಲೆಫ್ಟಿನೆಂಟ್ ಕಮಾಂಡರ್ ಜೆರಿನ್ ಮಾರ್ಟಿನ ಉದ್ಘಾಟಿಸಿ ಮಾತನಾಡಿ ಎನ್.ಸಿಸಿಯು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಲು ಪ್ರಯೋಜನಕಾರಿಯೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಶಂಕರನಾರಾಯಣ ಸಾರಡ್ಕ ಮಾತನಾಡಿ ಎನ್.ಸಿ.ಸಿ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು ,ಧೈರ್ಯ, ಸೇವಾಮನೋಭಾವ ಬೆಳೆಸುವಲ್ಲಿ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿ ಸುಬೇದಾರ್ ಕೆ ಎಚ್ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆಶ್ರಫ್ ಮುನಿಯೂರು, ಹಿರಿಯ ಅಧ್ಯಾಪಕ ಸರಕ್ಷನ್ ನಂಬಿಯಾರ್, ಆಡಳಿತ ಮಂಡಳಿ ಸದಸ್ಯ ಕೃಷ್ಣ ಪ್ರಸಾದ ರೈ ಪೆರಡಾಲ, ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯಿನಿ ತಂಗಮಣಿ ಟೀಚರ್ ಇವರಿಗೆ ಗೌರವಾರ್ಪಣೆ ಈ ಸಂದರ್ಭ ನಡೆಯಿತು. ಎನ್.ಸಿ.ಸಿ ನೂತನ ಸುಸಜ್ಜಿತ ಕೊಠಡಿಯ ಕೊಡುಗೆಯನ್ನು ತಂಗಮಣಿ ಟೀಚರ್ ನೀಡಿದರು, ಅಧ್ಯಾಪಕರಾದ ನಿರಂಜನ್ ರೈ ಪೆರಡಾಲ, ರಾಜೇಶ್ ಮಾಸ್ತರ್ ಅಗಲ್ಪಾಡಿ, ವಿದ್ಯಾ ಟೀಚರ್, ಈಶ್ವರ ಮಾಸ್ತರ್,ಸುಶೀಲ ಟೀಚರ್ ಉಪಸ್ಥಿತರಿದ್ದರು.ಶಾಲಾ ನೌಕರ ಸಂಘದ ಕಾರ್ಯದರ್ಶಿ ಕವಿತಾ ಟೀಚರ್ ಸ್ವಾಗತಿಸಿ, ಎನ್.ಸಿ.ಸಿ ಘಟಕದ ಯೋಜನಾಧಿಕಾರಿ ಕೃಷ್ಣ ಯಾದವ್ ವಂದಿಸಿದರು. ನಾರಾಯಣ ಆಸ್ರ ಕಾರ್ಯಕ್ರಮ ನಿರೂಪಿಸಿದರು.



