HEALTH TIPS

ಸರ್ವ ಧರ್ಮ ಸಮಭಾವ ಕೊಂಡೆವೂರಿನಲ್ಲಿ: ಡಾ. ಸುಬ್ರಹ್ಮಣಿಯನ್ ಸ್ವಾಮಿ: ಕುಳೂರು-ಕನ್ಯಾನ-ಮುಡಿಮೊಗರು ರಸ್ತೆ ಪುನರ್ ನಿರ್ಮಾಣ ಶಿಲಾನ್ಯಾಸ ನಿರ್ವಹಿಸಿ ಅಭಿಮತ

                                      

                ಉಪ್ಪಳ: ತೀವ್ರ ಹಿಂದುಳಿದ ಗ್ರಾಮೀಣ ಪ್ರದೇಶವಾದ ಕುಳೂರು ಕನ್ಯಾನ ಮಡಿಮೊಗರು ರಸ್ತೆಯ ಶಿಲಾನ್ಯಾಸದ ಫಲಕವನ್ನು ರಾಜ್ಯಸಭಾ ಸದಸ್ಯ, ವಿರಾಟ್ ಹಿಂದುಸ್ಥಾನ್ ಸಂಗಮದ ಅಧ್ಯಕ್ಷ ಡಾ. ಸುಬ್ರಹ್ಮಣಿಯನ್ ಸ್ವಾಮಿ ಗುರುವಾರ ಅನಾವರಣಗೊಳಿಸಿದರು.

         ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಡಾ.ಸ್ವಾಮಿ ಅವರು  ಸಂವಿಧಾನದಲ್ಲಿ ಹೇಳಿದ ಸರ್ವ ಧರ್ಮ ಸಮಭಾವ ಕೊಂಡೆವೂರಲ್ಲಿ ಮೂರ್ತರೂಪ ತಾಳಿದೆ. ಪೂರ್ತಿ ಭಾರತ ಒಂದು ಮಾತ್ರವಲ್ಲ ಮಹಿಳೆಯರೂ ವಿದ್ಯಾ, ರಕ್ಷಣೆ,ಆರ್ಥಿಕ ಕ್ಷೇತ್ರದಲ್ಲಿ 50 ಶೇ. ತೊಡಗಿಸಿಕೊಳ್ಳ ಬೇಕು. ಈ ರಸ್ತೆಯ ಮೂಲಕ ಸೇವೆಗೆ ಅವಕಾಶ ಮಾಡಿಕೊಟ್ಟ ಪೂಜ್ಯ ಸ್ವಾಮೀಜಿಯವರಿಗೆ ವಂದನೆಗಳು ಎಂದು ಮನದಾಳದಿಂದ ನುಡಿದರು. 


       ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮದ ಶುಭಾರಂಭಗೊಳಿಸಿ ಆಶೀರ್ವಚನಗೈದು ನ್ಯಾಯಕ್ಕಾಗಿ ಸದಾ ಹೋರಾಡುವ ಧೀಮಂತ ವ್ಯಕ್ತಿತ್ವದ ಡಾ.ಸ್ವಾಮಿಯವರು ಆಗಮಿಸಿರುವುದು ಹೆಮ್ಮೆಯ ವಿಷಯ. ಮೀಂಜ ಮಂಗಲ್ಪಾಡಿ ಪಂಚಾಯತುಗಳನ್ನು ಬೆಸೆಯುವ ಈ ಸಂಪರ್ಕ ರಸ್ತೆಯ ಮೂಲಕ ನಾವು ಪುರಾತನ ಸಂಸ್ಕøತಿಯ ಭಾರತ ಶಬ್ದಕ್ಕೆ ಜೀವ ತುಂಬಿ ಬಾಳಿ ಊರಿಗೇ ಒಳಿತಾಗಲಿ  ಎಂದು ಹಾರೈಸಿದರು. 


          ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿರಾಟ್ ಹಿಂದುಸ್ಥಾನ್ ಸಂಗಮದ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಮಠದ ಮೂಲಕ ಗ್ರಾಮಸುಧಾರಣೆಯ ಕೆಲಸವನ್ನು ಮಾಡುತ್ತಿರುವ ಪೂಜ್ಯರು ಪ್ರಾಚೀನ ಭಾರತದ ಪರಿಕಲ್ಪನೆ ಮೂಡಿಸುತ್ತಿದ್ದಾರೆ. ಎಂದರಲ್ಲದೆ ಇಲ್ಲಿರುವ ಶಾಸಕರು, ಜನಪ್ರತಿನಿಧಿಗಳು ಈ ರಸ್ತೆಯ ಕೆಲಸ ತುರ್ತು ಆಗುವಂತೆ ಮುತುವರ್ಜಿ ವಹಿಸಬೇಕು ಎಂದು ವಿನಂತಿಸಿದರು. ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ದೆಹಲಿಯಲ್ಲಿರುವ ಡಾ.ಸ್ವಾಮಿ ಅವರು ಈ ಪುಟ್ಟ ಗ್ರಾಮಕ್ಕೆ ಸಹಾಯ ನೀಡಿರುವುದು ಹೆಮ್ಮೆಯ ವಿಷಯ ಎಂದರು. 


          ಸಂಪರ್ಕರಸ್ತೆ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಇಲ್ಲಿರುವ  ಜನಪ್ರತಿನಿಧಿಗಳು ಮಾತ್ರವಲ್ಲ ಧಾರ್ಮಿಕ, ಸಾಮಾಜಿಕ ಮಖಂಡರೂ ಕೈಜೋಡಿಸಿ ಕೆಲಸ ಬೇಗ ಮುಗಿಯಲು ಇಂದೇ ಮುನ್ನಡೆಯೋಣ ಎಂದು ಕರೆ ನೀಡಿದರು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರಿಶಾನ ಸಾಬಿರ್, ಸಂರ್ಕರಸ್ತೆಯ ಅಧ್ಯಕ್ಷ ದಿನೇಶ ಬುಡಾಲೆ, ಮೀಂಜ ಪಂಚಾಯತ್ ಸದಸ್ಯ ಜನಾರ್ದನ ಪೂಜಾರಿ, ಅಜೀಶ್, ಮೂಸ ಮತ್ತು ಶಶಿಧರ ಶೆಟ್ಟಿ ಗ್ರಾಮಚಾವಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜ್ಯ ಶ್ರೀಗಳು ಡಾ. ಸ್ವಾಮಿಯವರಿಗೆ ಶಾಲುಹೊದಿಸಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಶಾಸಕ  ಎ.ಕೆ.ಯಂ. ಅಶ್ರಫ್ ದೇಶಕ್ಕೆ ಕಲೆ,ಸಂಸ್ಕøತಿಯ ಮತೀಯ ಸಾಮರಸ್ಯವನ್ನು ತೋರಿಸಿ ಕೊಟ್ಟ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಈ ಐತಿಹಾಸಿಕ ಮಹತ್ಕಾರ್ಯಕ್ಕೆ ಕಾರಣೀಭೂತರಾದ ಪೂಜ್ಯರಿಗೆ ಸಾಮರಸ್ಯದಿಂದ ಬಾಳಿ ಧನ್ಯವಾದ ಅರ್ಪಿಸೋಣ ಎಂದರು. ಕು.ಗಾಯತ್ರಿ ಪ್ರಾರ್ಥನೆ, ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಮಾಜಿ ಎಂ.ಎಲ್.ಸಿ.ಮೋನಪ್ಪ ಭಂಡಾರಿ ಸ್ವಾಗತಿಸಿ, ಜಗದೀಶ ಶೆಟ್ಟಿ ಎಲಿಯಾಣ ವಂದಿಸಿದರು.ನ್ಯಾಯವಾದಿ ಗಂಗಾಧರ ಕೊಂಡೆವೂರು ಮತ್ತು ದಿನಕರ್ ಹೊಸಂಗಡಿ ನಿರೂಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries