ಕಾಸರಗೋಡು: ನೋಂದಣಿ ಶುಲ್ಕ, ಫಿಟ್‍ನೆಸ್ ಶುಲ್ಕಗಳಲ್ಲಿನ ಗಣನೀಯ ಏರಿಕೆ ಹಾಗೂ ಹಸಿರು ತೆರಿಗೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಮೋಟಾರು ಕೋರ್ಡಿನೇಶನ್ ಸಮಿತಿ(ಬಿಎಂಎಸ್)ಕಾಸರಗೋಡು ಆರ್‍ಟಿಒ ಕಚೇರಿ ಎದುರು ಶುಕ್ರವಾರ ಧರಣಿ ನಡೆಯಿತು. ಆಟೋ ರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ನೇತೃಥ್ವದಲ್ಲಿ ಕೇರಳ ರಾಜ್ಯವ್ಯಾಪಕವಾಗಿ ನಡೆದ ಧರಣಿ ಹಿನ್ನೆಲೆಯಲ್ಲಿ ಕಸರಗೋಡಿನಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಪಿ. ದಿನೇಶ್ ಹರೀಶ್ ಕುದ್ರೆಪ್ಪಾಡಿ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ರಿಜೇಶ್ ಎನ್.ಎಸ್, ಕೆ ಉಮೇಶ್ ಉಪಸ್ಥಿತರಿದ್ದರು. ವಿದ್ಯಾನಗರ ಸರ್ಕಾರಿ ಕಾಲೇಜು ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಆರ್‍ಟಿಓ ಕಚೇರಿ ವರೆಗೆ ನಡೆಯಿತು. ಸಂಘಟನೆ ಮುಖಂಡರಾದ ಎ. ಕೇಶವ ಸುಂದರ ಪೂಜಾರಿ, ಮೋಹನದಾಸ ಕೊರಕೋಡು, ಪ್ರಸಾದ್ ನೇತಾಜಿ, ಸುರೇಶ್ ಕೆ, ಚಂದ್ರಶೇಖರನಾಯ್ಕ್, ಶಶಿ, ಪಾಂಡುರಂಗ, ಮೋಹನ್ ದಾಸ್ ಅಡ್ಕತ್ತಬೈಲ್ ನೇತೃತ್ವ ನೀಡಿದರು. ಸದಾಶಿವ ಮುಳ್ಳೇರಿಯ ಸ್ವಾಗತಿಸಿದರು. ಕುಞÂಕಣ್ಣನ್ ಚಾತಂಗೈ ವಂದಿಸಿದರು.




