ಅಹಮದಾಬಾದ್: ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವಿಡಿಯೋಗಳು ಸುಲಭವಾಗಿ ದಕ್ಕುವುದರಿಂದ ದೇಶದಲ್ಲಿ ಅತ್ಯಾಚಾರ ಹೆಚ್ಚಲು ಕಾರಣವೆಂದು ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಅಭಿಪ್ರಾಯ ಪಟ್ಟಿರುವುದಾಗಿ indiatoday.in ವರದಿ ಮಾಡಿದೆ.
0
samarasasudhi
ಏಪ್ರಿಲ್ 02, 2022
ಅಹಮದಾಬಾದ್: ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವಿಡಿಯೋಗಳು ಸುಲಭವಾಗಿ ದಕ್ಕುವುದರಿಂದ ದೇಶದಲ್ಲಿ ಅತ್ಯಾಚಾರ ಹೆಚ್ಚಲು ಕಾರಣವೆಂದು ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಅಭಿಪ್ರಾಯ ಪಟ್ಟಿರುವುದಾಗಿ indiatoday.in ವರದಿ ಮಾಡಿದೆ.
ಸಣ್ಣ ಹುಡುಗಿಯರ ಅತ್ಯಾಚಾರ ಪ್ರಕರಣಗಳಲ್ಲಿ ಬಹುತೇಕ ಪರಿಚಿತರು, ಸಂಬಂಧಿಕರು, ನೆರೆಹೊರೆಯವರೇ ಅಪರಾಧಿಗಳಾಗಿರುತ್ತಾರೆ, ಇದು ಕೂಡಾ ಅತ್ಯಾಚಾರ ಹೆಚ್ಚಾಗಲು ಕಾರಣ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಮೊಬೈಲ್ ಫೋನ್‌ಗಳು ಮತ್ತು ಅಪರಾಧ ಎಸಗುವ ಪರಿಚಿತ ವ್ಯಕ್ತಿಗಳು ಪ್ರಮುಖ ಕಾರಣ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಹರ್ಷ ಸಂಘ್ವಿ ಹೇಳಿದ್ದಾರೆ.
ಅತ್ಯಾಚಾರ ಘಟನೆಗಳಿಗೆ ನಾವು ಯಾವಾಗಲೂ ಪೊಲೀಸರನ್ನು ದೂಷಿಸುತ್ತೇವೆ. ಆದರೆ ಇಂತಹ ಘಟನೆಗಳು ಸಮಾಜಕ್ಕೆ ಕಳಂಕ. ಇಂತಹ ಘಟನೆಗಳಿಗೆ ನಾವು ಪೊಲೀಸರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಗುಜರಾತ್ ಅತ್ಯಂತ ಸುರಕ್ಷಿತವಾಗಿದೆ. ತಂದೆ ತನ್ನ ಚಿಕ್ಕ ಮಗಳ ಮೇಲೆ ಅತ್ಯಾಚಾರವೆಸಗಿದಾಗ, ಇದು ದೊಡ್ಡ ಸಾಮಾಜಿಕ ಸಮಸ್ಯೆಯಲ್ಲವೇ? ತಂದೆ ಮಗಳ ಮೇಲೆ ಅತ್ಯಾಚಾರವೆಸಗಿದರೆ ಅದಕ್ಕೆ ಕಾರಣ ಅವರ ಮೊಬೈಲ್ ಫೋನ್ ಎಂದು ಸಂಘ್ವಿ ಹೇಳಿದ್ದಾರೆ.