HEALTH TIPS

ಭಾರತ-ನೇಪಾಳ ಮಧ್ಯೆ ರೈಲು ಸಂಚಾರಕ್ಕೆ ಚಾಲನೆ; ಮುಕ್ತಗಡಿ ದುರ್ಬಳಕೆ ಆಗದಿರಲಿ ಎಂದ ಮೋದಿ

           ಕಠ್ಮಂಡು: ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದ ನೇಪಾಳದ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಉಭಯರಾಷ್ಟ್ರಗಳ ಸಂಬಂಧ ಕುರಿತು ಮಾತುಕತೆ ನಡೆಸಿದ್ದಾರೆ.

         ಈ ಸಂದರ್ಭದಲ್ಲಿ ಭಾರತ-ನೇಪಾಳ ಮಧ್ಯೆ ರೈಲು ಸಂಚಾರಕ್ಕೂ ಚಾಲನೆ ನೀಡಲಾಗಿದೆ.

ಭಾರತದ ಗಡಿ ಪ್ರದೇಶದಲ್ಲಿನ ಜಯನಗರ ಮತ್ತು ನೇಪಾಳದ ಬಿಜಾಲ್​ಪುರ್ ಮಧ್ಯೆ ಈ ರೈಲು ಸಂಚಾರ ಆರಂಭಗೊಂಡಿದೆ. ಇವೆರಡರ ಮಧ್ಯೆ ಈ ಹಿಂದೆಯೇ ರೈಲು ಸಂಚಾರ ಇದ್ದಿದ್ದರೂ ಅದು 21 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಸಂಭವಿಸಿದ್ದ ಭಾರಿ ಭೂಕುಸಿತದಿಂದಾಗಿ ಸ್ಥಗಿತಗೊಂಡಿತ್ತು.

            ಇದೇ ಸಂದರ್ಭದಲ್ಲಿ ನೇಪಾಳದಲ್ಲಿನ ರುಪೇ ಸೇವೆಗೂ ಚಾಲನೆ ನೀಡಲಾಗಿದೆ. ಜತೆಗೆ ನೇಪಾಳದ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನೂ ಉದ್ಘಾಟಿಸಲಾಯಿತು. ಅಲ್ಲದೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

            ಮತ್ತೊಂದೆಡೆ ರೈಲ್ವೆ ಸಂಚಾರದಿಂದ ಮುಕ್ತಗೊಂಡಿರುವ ಭಾರತ-ನೇಪಾಳದ ಗಡಿ ಭಾಗ ಸಮಾಜಘಾತಕ ಶಕ್ತಿಗಳಿಂದ ದುರ್ಬಳಕೆ ಆಗಬಾರದು ಎಂಬುದಾಗಿಯೂ ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries