ಕಾಸರಗೋಡು: ಶೇ.100ರಷ್ಟು ತೆರಿಗೆ ವಸೂಲಾತಿ ಸಾಧಿಸಿದ ಪನತ್ತಡಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಕಾಸರಗೋಡು ಸ್ಥಳೀಯಾಡಳಿತ ಸಂಸ್ಥೆ ಜಂಟಿ ನಿರ್ದೇಶಕರ ಕಛೇರಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪನತ್ತಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡಿಪಿ ಕೆ.ವಿ ಹರಿದಾಸ ಸ್ಮರಣಿಕೆ ಹಸ್ತಾಂತರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಹಾಗೂ ಪಂಚಾಯಿತಿ ಸದಸ್ಯರು ಸ್ಮರಣಿಕೆ ಸ್ವೀಕರಿಸಿದರು. ಪಂಚಾಯಿತಿ ಉಪಾಧ್ಯಕ್ಷ ಪಿ.ಎಂ. ಕುರಿಯಕೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಅರವಿಂದನ್, ಸುಪ್ರಿಯಾ ಶಿವದಾಸ್, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಸುರೇಶ್ ಕುಮಾರ್ ಸ್ವಾಗತಿಸಿ, ಸಹಾಯಕ ಕಾರ್ಯದರ್ಶಿ ಕೆ.ರವೀಂದ್ರನ್ ವಂದಿಸಿದರು.


