ಕಾಸರಗೋಡು: ಸಮೃದ್ಧಿ ಹಾಗೂ ಐಶ್ವರ್ಯದ ಸಂಕೇತವಾಗಿರುವ ವಿಷುಹಬ್ಬವನ್ನು ನಾಡಿನಾದ್ಯಂತ ಏ. 15ರಂದು ಆಚರಿಸಲಿದ್ದಾರೆ. ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿಷು ಸೇರಿದಂತೆ ವಿವಿಧ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಯಂತ್ರಣ ಹೇರಲಾಗಿದ್ದರೆ, ಈ ಬಾರಿ ನಿಯಂತ್ರಣಗಳನ್ನು ಸಡಿಲಗೊಳಿಸಲಾಗಿದೆ. ವಿಷು, ಈಸ್ಟರ್, ರಂಜಾನ್ ಹಬ್ಬಗಳು ಸರಣಿಯಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲೂ ಜನದಟ್ಟಣೆ ಹೆಚ್ಚಾಗಿದೆ. ವಿಷು ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ವಿಷುಕಣಿದರ್ಶನ, ಕೆಲವೊಂದು ದೇಗುಲಗಳಲ್ಲಿ ತಪ್ಪಂಗಾಯಿ ಸೇರಿದಂತೆ ವಿವಿಧ ಪಂದ್ಯಗಳನ್ನೂ ಅಯೋಜಿಸಲಾಗುತ್ತಿದೆ.
ಚಿತ್ರ: ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಿನ್ನೆ ಕಂಡುಬಂದ ಪುಷ್ಪ ವ್ಯಾಪಾರ ಭರಾಟೆ.

