ಬದಿಯಡ್ಕ: ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 50 ಲಕ್ಷ ರೂ. ನೂತನವಾಗಿ ನಿರ್ಮಿಸಲಾದ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ಕಟ್ಟಡವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಇಂಧನ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಶನಿವಾರ ಬೆಳಗ್ಗೆ ಉದ್ಘಾಟಿಸಿದರು. ಜೊತೆಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ ಗಡಿ ಸಾಂಸ್ಕøತಿಕ ಉತ್ಸವವನ್ನು ಅವರು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಕನ್ನಡ ಭಾಷೆ ಸಂಸ್ಕøತಿ ನಮ್ಮ ದಿನನಿತ್ಯದ ಮಂತ್ರವಾಗಬೇಕು. ಕಾಸರಗೋಡು ಆಡಳಿತಾತ್ಮಕವಾಗಿ ಕೇರಳದಲ್ಲಿದ್ದರೂ, ಸಾಂಸ್ಕøತಿಕವಾಗಿ, ಹೃದಯದಿಂದ ಕರ್ನಾಟಕದ ಭಾಗವೇ ಆಗಿದೆ. ಕನ್ನಡ ಭಾಷೆ, ಸಂಸ್ಕøತಿಯ ಪ್ರೇರಣೆಗೆ ಇಲ್ಲಿಯ ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದವರು ತಿಳಿಸಿದರು. ಗಡಿಭಾಗದ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಡಿ ಅಭಿವೃದ್ದಿ ಪ್ರಾಧಿಕಾರದ ಡಾ.ಸಿ. ಸೋಮಶೇಖರ್ ಅವರು ಅಧ್ಯಕ್ಷರಾದ ಬಳಿಕ ವ್ಯಾಪಕ ಬೆಂಬಲ ನೀಡಲಾಗುತ್ತಿದೆ. ಈವರೆಗೆ ಗಡಿನಾಡಿನ ಕನ್ನಡ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರ 8.5 ಕೋಟಿ ಅನುದಾನ ಬಿಡುಗಡೆಮಾಡಿದೆ ಎಂದವರು ಉಲ್ಲೇಖಿಸಿದರು. ಕಯ್ಯಾರ ಕಿಂಞÂ್ಞಣ್ಣ ರೈಗಳ ನೆನಪಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡಲಿದೆ ಎಂದವರು ತಿಳಿಸಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಆಶೀರ್ವಚನ ನೀಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವು ಗಡಿನಾಡ ಕನ್ನಡಿಗರ ಕಾವಲು ವ್ಯವಸ್ಥೆಯಾಗಿ ಸಾಕಷ್ಟು ಬಲ ತುಂಬಿದೆ. ಇಲ್ಲಿಯ ಕನ್ನಡಿಗರ ಆತ್ಮಸ್ಥೈರ್ಯ ಬೆಳೆಸುವಲ್ಲಿ ಅಭಿವೃದ್ದಿ ಪ್ರಾಧಿಕಾರ ಸ್ತುತ್ಯರ್ಹ ಕಾರ್ಯನಿರ್ವಹಿಸುತ್ತಿದೆ ಎಂದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಎಡನೀರು ಧರ್ಮ, ಸಂಸ್ಕøತಿ, ಶಿಕ್ಷಣದ ಕೇಂದ್ರ ಎಂದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕೇರಳ ರಾಜ್ಯ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್, ಪ್ರಮುಖರಾದ ಟಿ.ಶ್ಯಾಮ ಭಟ್, ಎಸ್.ವಿ.ಭಟ್ ಕಾಸರಗೋಡು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಮತ್ತೀಹಳ್ಳಿ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ವಂದಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ಈ ಸಂದರ್ಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಉಪಸ್ಥಿತರಿದ್ದು ಕೋವಿಡ್ ಸಂಕಷ್ಟದ ವೇಳೆ ತೊಂದರೆಗೊಳಗಾದ ಪತ್ರಕರ್ತರ ಬವಣೆಯ ಬಗ್ಗೆ ತಾವು ಬರೆದ "ತಗಡೂರು ಹೇಳಿದ ಕೋವಿಡ್ ಕಥೆಗಳು" ಕೃತಿಯನ್ನು ಶ್ರೀಗಳಿಗೆ ಹಸ್ತಾಂತರಿಸಲಾಯಿತು. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಮಂಜೇಶ್ವರ ನಾಟ್ಯನಿಲಯಂ ಕೇಂದ್ರದ ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ |ಶಿಷ್ಯವೃಂದದವರಿಂದ ಗೀತ ನೃತ್ಯ-"ಬಾರಿಸು ಕನ್ನಡ ಡಿಂಡಿಮವ" ವಿಶೇಷ ನೃತ್ಯ ಪ್ರದರ್ಶನ ನಡೆಯಿತು. ಅಪರಾಹ್ನ 1.30 ರಿಂದ 3ರ ವರೆಗೆ ಗಾಯಕ ಕಿಶೋರ್ ಪೆರ್ಲ ಮತ್ತು ತಂಡದವರಿಂದ ಕನ್ನಡ ಭಾವಸಂಗಮ ಕಾರ್ಯಕ್ರಮ ನಡೆಯಿತು. ಸಂಜೆ ಸಮಾರೋಪ ಸಮಾರಂಭ ಮತ್ತು ಕನ್ನಡ ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಸೋಮಶೇಖರ್ ಉಪಸ್ಥಿತರಿದ್ದರು. ಸಾಹಿತಿ ಕೆ.ಸಿ.ಶಿವಪ್ಪ ಸಮಾರೋಪ ಭಾಷಣ ಮಾಡಿದರು. ಬಳಿಕ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮತ್ತು ಬಳಗದವರಿಂದ ವಿಶ್ವಾಮಿತ್ರ ಮೇನಕೆ ಯಕ್ಷಗಾನ ಪ್ರದರ್ಶನ ನಡೆಯಿತು.




.jpg)
.jpg)
.jpg)
.jpg)
.jpg)
