ಮಧೂರು: ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಸುಲಭ ದಾರಿ. ಈ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ನಿರಂತರ ಭಜನೆ ಸಂಕೀರ್ತನೆ ನಡೆಯಬೇಕು. ಮಕ್ಕಳಿಗೂ ಭಜನೆಯ ಮಹತ್ವದ ಅರಿವು ಮೂಡಿಸಿ ಅವರನ್ನು ತೊಡಗಿಸಬೇಕು. ಮುಂದಿನ ಭವಿಷ್ಯವನ್ನು ರೂಪಿಸುವ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಪ್ರಾರಂಭವಾಗಬೇಕೆಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆಯೋಜಿಸಿದ ಮಂಡಲ ಭಜನಾ ಸಂಕೀರ್ತನೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಕೃತಜ್ಞತಾ ಪತ್ರ ಪ್ರದಾನ ಮಾಡಿದರು.
ಹಿಂದೂ ಸಮಾಜ ಸದೃಢವಾಗಬೇಕು. ಈ ಸಂಕಲ್ಪ ನೆರವೇರಬೇಕಾದರೆ ಹಿಂದೂಗಳೆಲ್ಲ ಸಂಘಟಿತರಾಗಬೇಕು. ಈ ಮೂಲಕ ಪ್ರಸ್ತುತ ಎದುರಾಗಿರುವ ಗಂಡಾಂತರದಿಂದ ಪಾರಾಗಲು ಸಾಧ್ಯ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಸಮಾರೋಪ ನುಡಿಯನ್ನಾಡಿದರು.
ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ದೇರೇಬೈಲು ಗೌರವ ಉಪಸ್ಥಿತರಿದ್ದು ಆಶೀರ್ವದಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಗೌರವ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕುಟುಂಬ ಪ್ರಬೋಧನ ಪ್ರಮುಖ್ ತೋನ್ಸೆ ಗಜಾನನ ಪೈ ಅವರು ಧಾರ್ಮಿಕ ಸಂದೇಶ ನೀಡಿದರು. ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು, ನವೀಕರಣ ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯ ಕಾರ್ಯಕಾರಿ ಸದಸ್ಯ ಅಪ್ಪಯ್ಯ ನಾೈಕ್, ನವೀಕರಣ ಸಮಿತಿ ಕಾರ್ಯದರ್ಶಿ ಮುರಳಿ ಗಟ್ಟಿ, ಸುರೇಶ್ ನಾೈಕ್, ಎ.ಮನೋಹರ, ಪ್ರಭಾಶಂಕರ ಮಧೂರು, ಮಂಜುನಾಥ ಕಾಮತ್, ಗಿರೀಶ್, ಸಂತೋಷ್ ಮಧೂರು ಮೊದಲಾದವರು ಉಪಸ್ಥಿತರಿದ್ದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.




.jpg)
