ನವದೆಹಲಿ: ಕೋವಿಡ್ ತಡೆ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಅನ್ನು 18-59 ವಯೋಮಾನದ 85,000 ಜನರು ಮಾತ್ರ ಹಾಕಿಸಿಕೊಂಡಿದ್ದಾರೆ. ಎಲ್ಲ ವಯಸ್ಕರು ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿದ ನಾಲ್ಕು ದಿನಗಳಲ್ಲಿ ಇಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
0
samarasasudhi
ಏಪ್ರಿಲ್ 15, 2022
ನವದೆಹಲಿ: ಕೋವಿಡ್ ತಡೆ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಅನ್ನು 18-59 ವಯೋಮಾನದ 85,000 ಜನರು ಮಾತ್ರ ಹಾಕಿಸಿಕೊಂಡಿದ್ದಾರೆ. ಎಲ್ಲ ವಯಸ್ಕರು ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿದ ನಾಲ್ಕು ದಿನಗಳಲ್ಲಿ ಇಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಎಲ್ಲ ವಯಸ್ಕರು ಖಾಸಗಿ ಕೇಂದ್ರ ಗಳಲ್ಲಿ ಇದೇ 10ರಿಂದ ಲಸಿಕೆ ಹಾಕಿಸಿ ಕೊಳ್ಳಬಹುದು ಎಂದು ಸರ್ಕಾರ ಹೇಳಿತ್ತು. 18-44ರ ವಯೋಮಾನದ 18,406 ಮಂದಿ ಮತ್ತು 45-59ರ ವಯೋಮಾನದ 66,748 ಮಂದಿ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡಿದ್ದಾರೆ. ಕೋವಿಡ್ ತಡೆ ಲಸಿಕೆ ಹಾಕಿಸಿಕೊಂಡ ಕೆಲವು ತಿಂಗಳ ಬಳಿಕ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಳ್ಳುವ ಉತ್ಸಾಹ ಜನರಲ್ಲಿ ಕಾಣಿಸುತ್ತಿಲ್ಲ.
'ಮುನ್ನೆಚ್ಚರಿಕೆ ಡೋಸ್ ತಮ್ಮನ್ನು ತೀವ್ರ ಅನಾರೋಗ್ಯದಿಂದ ರಕ್ಷಿಸಬಲ್ಲುದು ಮತ್ತು ರಕ್ಷಣೆಯನ್ನು ಹೆಚ್ಚಿಸಬಲ್ಲುದು ಎಂಬುದನ್ನು ಜಾಗೃತಿಯ ಮೂಲಕ ಜನರಿಗೆ ತಿಳಿಸಬೇಕು' ಎಂದು ಬೆಂಗಳೂರಿನ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸೋಂಕುಶಾಸ್ತ್ರಜ್ಞ ಆರ್. ಗಿರಿಧರ ಬಾಬು ಹೇಳಿದ್ದಾರೆ.
ಎರಡನೇ ಡೋಸ್ ಹಾಕಿಸಿಕೊಂಡು ಒಂಬತ್ತು ತಿಂಗಳ ಬಳಿಕವೇ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಳ್ಳಬೇಕು ಎಂಬ ನಿಯಮ ಇದೆ. ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡ ಜನರ ಸಂಖ್ಯೆ ಕಡಿಮೆ ಇರಲು ಇದು ಕೂಡ ಕಾರಣ ಎನ್ನಲಾಗಿದೆ.