ಉಪ್ಪಳ: ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ವತಿಯಿಂದ ಜರಗುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನ ಯಕ್ಷಗಾನÀ ಗುರು, ವೇಷಧಾರಿ, ಭಾಗವತ , ಕವಿ ಸಾಹಿತಿ ಶೇಖರ ಶೆಟ್ಟಿ ಬಾಯಾರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಬಿ ಜೆ ಪಿ ಜಿಲ್ಲಾ ಕಾರ್ಯದರ್ಶಿ , ಪಂಚಾಯತಿ ಸದಸ್ಯ ವಿಜಯಕುಮಾರ್ ರೈ ಸಭಾಧ್ಯಕ್ಷತೆ ವಹಿಸಿದ್ದು, ಯಕ್ಷ ಮೌಕ್ತಿಕ ತಂಡದ ಗುರು ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ತರುವಾಯ ಯಕ್ಷ ಭಾರತೀ ನೀರ್ಚಾಲು ತಂಡದವರಿಂದ ಸುದರ್ಶನ ವಿಜಯ ತಾಳಮದ್ದಳೆ ಜರಗಿತು.




.jpeg)
