HEALTH TIPS

ಹೆರಿಗೆ ಕೊಠಡಿಯಲ್ಲಿ ಪತ್ನಿಯನ್ನು ಬಿಟ್ಟು ಮದ್ಯ ಸೇವಿಸಲು ಪುತ್ರನೊಂದಿಗೆ ಬಾರ್ ಗೆ ತೆರಳಿ ಪುತ್ರನನ್ನು ಮರೆತು ಬಂದ ಕುಡುಕ ತಂದೆ!: ಅಲಪ್ಪುಳದಲ್ಲಿ ಹೀಗೊಂದು ಘಟನೆ

                                             

                   ಆಲಪ್ಪುಳ: ಪತ್ನಿಯನ್ನು ಹೆರಿಗೆ ಕೊಠಡಿಯಲ್ಲಿ ಬಿಟ್ಟು ಬಂದ ಕುಡುಕ ಪತಿಯೊಬ್ಬ ಬಾರ್ ಎದುರು ಮಗನನ್ನು ಮರೆತು ಬಿಟ್ಟುಹೋದ ಘಟನೆ ನಡೆದಿದೆ. ಅಸ್ಸಾಂ ಮೂಲದ ಈತ ತನ್ನ ಪತ್ನಿಯನ್ನು ಹೆರಿಗೆಗೆಂದು ಚೆಂಗನ್ನೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಮಗನೊಂದಿಗೆ ಮದ್ಯ ಸೇವಿಸಲು ಬಾರ್‍ಗೆ ತೆರಳಿದ್ದ. ಆ ಬಳಿಕ ಕಂಠಪೂರ್ತಿ ಕುಡಿದು ಪುತ್ರನನ್ನು ಮರೆತುಬಿಟ್ಟು ಒಬ್ಬನೇ ಆಸ್ಪತ್ರೆಗೆ ವಾಪಸ್ ಹೋಗಿದ್ದಾನೆ.

                 ಆಸ್ಪತ್ರೆಗೆ ಬಂದಿದ್ದ ಪತಿಯೊಂದಿಗೆ ಮಗ ನಾಪತ್ತೆಯಾಗಿರುವುದು ತಾಯಿಗೆ ಆಘಾತ ತಂದಿದೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಡಿವೈಎಸ್ಪಿ ಡಾ. ಆರ್.ಜೋಸ್ ನೇತೃತ್ವದ ಪೆÇಲೀಸ್ ತಂಡ ಹುಡುಕಾಟ ಆರಂಭಿಸಿದರು.

                  ತನ್ನ ತಂದೆಯನ್ನು ಕಾಣದೆ ಗಾಬರಿಗೊಂಡು ನಗರದ ಮಾರುಕಟ್ಟೆಯಲ್ಲಿ ಅಲೆದಾಡುತ್ತಿದ್ದ ಹುಡುಗನನ್ನು ಪೆÇಲೀಸರು ಕೊನೆಗೂ ಪತ್ತೆಹಚ್ಚಿದರು. ಹುಡುಗ ಸುಮಾರು ಒಂದೂವರೆ ಗಂಟೆಗಳ ಕಾಲ ತನ್ನ ತಂದೆಯನ್ನು ಹುಡುಕುತ್ತಿದ್ದನು. ತಂದೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries