HEALTH TIPS

ಮಧ್ಯಪ್ರದೇಶ: ಪಿಎಂಎವೈ ಯೋಜನೆಯಡಿ ನಿರ್ಮಿಸಿದ್ದ ಮನೆ ನೆಲಸಮ

               ಖಾರ್ಗೋನ್‌ಮಧ್ಯಪ್ರದೇಶದ ಖಾರ್ಗೋನ್‌ ನಗರದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ (ಪಿಎಂಎವೈ) ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ರಾಮ ನವಮಿ ವೇಳೆ ನಡೆದ ಹಿಂಸಾಚಾರದ ನಂತರ ನೆಲಸಮಗೊಳಿಸಲಾಗಿದೆ. ಮನೆಯನ್ನು ಬೇರೆಡೆ ನಿರ್ಮಿಸಬೇಕಾಗಿತ್ತು.

              ಇದನ್ನು ವಾಸದ ಹೊರತು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಹಿಂಸಾಚಾರದಲ್ಲಿ ಭಾಗವಹಿಸಿದ್ದವರ ವಿರುದ್ಧದ ಕ್ರಮವಾಗಿ ಮನೆಯನ್ನು ನೆಲಸಮಗೊಳಿಸಿರುವ ವರದಿಯನ್ನು ಉಲ್ಲೇಖಿಸಿ ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

            ಖಾಸ್ಖಾಸ್ವಾಡಿ ಪ್ರದೇಶದ ಬಿರ್ಲಾ ಮಾರ್ಗ್‌ನಲ್ಲಿರುವ ಈ ಮನೆಯು ಹಸೀನಾ ಫಖ್ರೂ (60) ಅವರಿಗೆ ಸೇರಿದೆ. ರಾಮ ನವಮಿ ಉತ್ಸವದ ವೇಳೆ ನಡೆದ ವಿವಿಧ ಹಿಂಸಾಚಾರಗಳು ಮತ್ತು ಕಲ್ಲು ತೂರಾಟದಲ್ಲಿ ಭಾಗವಹಿಸಿದ ಆರೋಪಿಗಳಿಗೆ ಸೇರಿದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕ್ರಮವಾಗಿ ಸೋಮವಾರ ಸ್ಥಳೀಯ ಅಧಿಕಾರಿಗಳು ಮನೆಯನ್ನು ನೆಲಸಮಗೊಳಿಸಿದ್ದಾರೆ.

           'ಪಿಎಂಎವೈ ಯೋಜನೆಯಡಿ ನಿರ್ಮಿಸುವ ಮನೆಗಳನ್ನು ವಾಸಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಸ್ಥಳೀಯ ಆಡಳಿತ ಅಲ್ಲಿಗೆ ಹೋದಾಗ ಇತರ ಉದ್ದೇಶಗಳಿಗೆ ಮನೆಯನ್ನು ಬಳಸುತ್ತಿದ್ದುದು ಕಂಡು ಬಂದಿದೆ. ಅಲ್ಲಿ ಯಾರೂ ವಾಸವಿರಲಿಲ್ಲ'

           'ಪಿಎಂಎವೈ ಅಡಿಯಲ್ಲಿ ಬೇರೆ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದ ಅವರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಮನೆಯ ತೆರವಿಗೆ ತಹಸೀಲ್ದಾರ್‌ ಆದೇಶಿಸಿದ ನಂತರ ನೆಲಸಮಗೊಳಿಸಲಾಗಿದೆ' ಎಂದು ಸ್ಥಳೀಯ ಆಡಳಿತದ ಮುಖ್ಯ ಅಧಿಕಾರಿ ಪ್ರಿಯಾಂಕಾ ಪಟೇಲ್‌ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries