ನವದೆಹಲಿ: ರೈಲ್ವೆ ಮಾರ್ಗಗಳು ಜಲಾವೃತವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಮಾರ್ಗಗಳನ್ನು ರಸ್ತೆಗಳಡಿಯಲ್ಲಿ ನಿರ್ಮಿಸುವ ಬದಲಿಗೆ ಮೇಲ್ಸೇತುವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
0
samarasasudhi
ಏಪ್ರಿಲ್ 06, 2022
ನವದೆಹಲಿ: ರೈಲ್ವೆ ಮಾರ್ಗಗಳು ಜಲಾವೃತವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಮಾರ್ಗಗಳನ್ನು ರಸ್ತೆಗಳಡಿಯಲ್ಲಿ ನಿರ್ಮಿಸುವ ಬದಲಿಗೆ ಮೇಲ್ಸೇತುವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, 'ರೈಲ್ವೆ ಹಳಿಯ ಮೇಲ್ಸೇತುವೆ ಯೋಜನೆಗಳಿಗೆ ರಸ್ತೆಯ ಅಡಿ ರೈಲ್ವೆ ಹಳಿ ನಿರ್ಮಾಣಕ್ಕಿಂತಲೂ ಹೆಚ್ಚು ವೆಚ್ಚವಾಗುತ್ತದೆ. ಆದಾಗ್ಯೂ, ಸಾಮಾನ್ಯವಾಗಿ ಉದ್ಭವವಾಗುವ ಜಲಾವೃತ ಸಮಸ್ಯೆಯನ್ನು ತಡೆಯಲು ಈಗಿರುವ ರಸ್ತೆಯ ಅಡಿಯ ರೈಲ್ವೆ ಯೋಜನೆಗಳನ್ನು ಸಾಧ್ಯವಿರುವಷ್ಟು ಮೇಲ್ಸೇತುವೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ' ಎಂದು ಹೇಳಿದರು.