ತಿರುವಲ್ಲ:ಪ್ರಖ್ಯಾತ ಮಲಯಾಳಂ ನಟ ಗಿನ್ನೆಸ್ಸ್ ಪಕ್ರು ಅಲಿಯಾಸ್ ಅಜಯ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಕೇರಳದ ಥಿರುವಲ್ಲ ಪಟ್ಟಣದಲ್ಲಿ ನಡೆದಿದೆ.
0
samarasasudhi
ಏಪ್ರಿಲ್ 12, 2022
ತಿರುವಲ್ಲ:ಪ್ರಖ್ಯಾತ ಮಲಯಾಳಂ ನಟ ಗಿನ್ನೆಸ್ಸ್ ಪಕ್ರು ಅಲಿಯಾಸ್ ಅಜಯ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಕೇರಳದ ಥಿರುವಲ್ಲ ಪಟ್ಟಣದಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಥಿರುವಲ್ಲ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಹೋದ ಲಾರಿ ಎದುರು ಬರುತ್ತಿದ್ದ ಗಿನ್ನೆಸ್ಸ್ ಪಕ್ರು ಅವರ ಕಾರಿನ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಪಕ್ರು ಅವರು ತಿರುವನಂತಪುರದಿಂದ ಕೊಚ್ಚಿಗೆ ತೆರಳು ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಥಿರುವಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಪಕ್ರು ಅವರು ಫೇಸ್ಬುಕ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣ ಉಳಿಯಿತು. ದಯವಿಟ್ಟು ಸೀಟ್ ಬೆಲ್ಟ್ ಧರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಾರಿ ಡಿಕ್ಕಿ ಹೊಡೆದರೂ ಒಂದೇ ಒಂದು ಗಾಯಗಳಾಗದೇ ಪಕ್ರು ಅವರು ಬಚಾವ್ ಆಗಿದ್ದಾರೆ. ಚಾಲಕ ಶಿವನ್, ನೆರವಿಗೆ ಬಂದ ಯುವಕರು, ಎಸ್ಐ ಹುಮಾಯುನ್, ತಮ್ಮ ಸ್ನೇಹಿತ ಮ್ಯಾಥೀವ್ ನೈನಾನ್ ಮತ್ತು ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.