ಕಣ್ಣೂರು: ತಲಶ್ಶೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಮನೆಗೆ ಸಿಪಿಎಂ ಪಕ್ಷದ ಕಾರ್ಯಕರ್ತರು ರೀತ್ (ಹಾg)À ಹಾಕಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಗೋಪಾಲಪೇಟೆಯ ಸುಮೇಶ್ ಅವರ ಮನೆಯ ವರಾಂಡಾದಲ್ಲಿ ಹಾರ ಮತ್ತು ಶ್ರೀಗಂಧದ ಮೇಣದಬತ್ತಿಗಳನ್ನು ಇರಿಸಲಾಗಿತ್ತು.
ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮನೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಮಾಲೆ ಕಂಡುಬಂದಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಕಣ್ಣೂರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸಿಪಿಎಂ ಇದೇ ರೀತಿಯ ಬೆದರಿಕೆ ಹಾಕಿತ್ತು.
ಸಿಪಿಎಂ ಕಾರ್ಯಕರ್ತ ಪುನ್ನೋಲ್ ಹರಿದಾಸನ್ ಹತ್ಯೆಗೆ ಸಂಬಂಧಿಸಿದಂತೆ ಸಿಪಿಎಂ ಮುಖಂಡರು ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು. ಇದಾದ ಬಳಿಕ ಇದೀಗ ಪುಷ್ಪಾಗುಚ್ಚ (ರೀತ್: ಮೃತದೇಹದ ಮೇಲಿರಿಸುವ ಹೂಗಳ ಗುಚ್ಚ) ಇರಿಸಲಾಗಿತ್ತು.
ಕಣ್ಣೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಪಾಪ್ಯುಲರ್ ಫ್ರಂಟ್ ಹಿಂಸಾಚಾರ ನಡೆಸುವ ಸಾಧ್ಯತೆ ಇದೆ ಎಂಬ ಗ್ರಾಮಾಂತರ ಎಸ್‍ಪಿ ವರದಿ ನಿನ್ನೆ ಬಿಡುಗಡೆಯಾಗಿದೆ. ಪಾಲಕ್ಕಾಡ್ ಹಿಂಸಾಚಾರ ಮತ್ತು ಕೊಲೆಗಳ ನಂತರ ವರದಿ ಬಂದಿದೆ. ಪಾಪ್ಯುಲರ್ ಫ್ರಂಟ್ ನ ಹಿಂಸಾಚಾರದಲ್ಲಿ ರಾಜ್ಯಾದ್ಯಂತ ಸಿಪಿಎಂ ಭಾಗಿಯಾಗಿದೆ ಎಂಬ ಆರೋಪದ ನಡುವೆಯೇ ಬಿಜೆಪಿ ಕಾರ್ಯಕರ್ತನ ಮನೆಯ ವರಾಂಡದಲ್ಲಿ ರೀತ್ ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.





