HEALTH TIPS

BREAKING: ಪಾಲಕ್ಕಾಡ್ ನಲ್ಲಿ ಪಾಪ್ಯುಲರ್ ಫ್ರಂಟ್ ನಾಯಕನ ಹತ್ಯೆ; ಎಲಪ್ಪುಳ್ಳಿಯಲ್ಲಿ ಘಟನೆ


       ಪಾಲಕ್ಕಾಡ್: ಎಲಪ್ಪುಳ್ಳಿ ಎಂಬಲ್ಲಿ  ಪಾಪ್ಯುಲರ್ ಫ್ರಂಟ್ ನಾಯಕನೊಬ್ಬನನ್ನು ಕಡಿದು ಹತ್ಯೆ ಮಾಡಲಾಗಿದೆ.  ಪಾಪ್ಯುಲರ್ ಫ್ರಂಟ್ ನೇತಾರನೆನ್ನಲಾದ  ಜುಬೇರ್ (47) ಕೊಲೆಯಾದವರು.  ಜುಬೇರ್ ಪಾಪ್ಯುಲರ್ ಫ್ರಂಟ್‌ನ ಎಲಪ್ಪುಳ್ಳಿ ಕ್ಷೇತ್ರ ಅಧ್ಯಕ್ಷರಾಗಿದ್ದಾರೆ.
       ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ.  ಮಸೀದಿಯ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದಾಗ ಜುಬೈರ್‌ಗೆ ಇರಿಯಲಾಗಿದೆ.  ಕಾರಿನಲ್ಲಿ ಆಗಮಿಸಿದ ವ್ಯಕ್ತಿಗಳ ಗುಂಪು ಜುಬೈರ್‌ಗೆ ಯದ್ವಾತದ್ವ ಇರಿದು ಸಾಯಿಸಿದರು. ಜತೆಗಿದ್ದ ಜುಬ್ಯೆರ್ ನ  ತಂದೆಗೂ ಸಣ್ಣಪುಟ್ಟ ಗಾಯಗಳಾಗಿವೆ.
         ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಜುಬೈರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.  ಇದರ ಹಿಂದೆ ರಾಜಕೀಯ ದ್ವೇಷವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries