HEALTH TIPS

ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.15.08ಕ್ಕೆ ಏರಿಕೆ: 17 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ

                ನವದೆಹಲಿ :ಆಹಾರದಿಂದ ಸರಕುಗಳವರೆಗೆ ಎಲ್ಲ ವರ್ಗಗಳಲ್ಲಿ ಹೆಚ್ಚುತ್ತಿರುವ ಬೆಲೆಗಳಿಂದಾಗಿ ಎಪ್ರಿಲ್‌ನಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ (ಡಬ್ಲುಪಿಐ)ವು ಶೇ.15.08ಕ್ಕೆ ಜಿಗಿಯುವ ಮೂಲಕ 17 ವರ್ಷಗಳ ಗರಿಷ್ಠ ಮಟ್ಟವನ್ನು ದಾಖಲಿಸಿದೆ. ಇದರೊಂದಿಗೆ ಡಬ್ಲುಪಿಐ ಸತತ 13ನೇ ತಿಂಗಳಿಗೂ ಎರಡಂಕಿಗಳಲ್ಲಿ ಉಳಿದುಕೊಂಡಿದೆ.

           ಡಬ್ಲುಪಿಐ ಮಾರ್ಚ್ ನಲ್ಲಿ ಶೇ.14.55 ಮತ್ತು ಕಳೆದ ವರ್ಷದ ಎಪ್ರಿಲ್‌ನಲ್ಲಿ ಶೇ.10.74ರಷ್ಟಿತ್ತು. ಅದು 2020 ನವಂಬರ್ ನಲ್ಲಿ ಶೇ.2.29ರಷ್ಟಿತ್ತು.

             ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯದ ಆಕ್ರಮಣವು ಅದಾಗಲೇ ಏರುಗತಿಯಲ್ಲಿದ್ದ ಸರಕುಗಳು ಮತ್ತು ಇಂಧನಗಳ ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಿದ್ದು,ಜಾಗತಿಕ ನೀತಿರೂಪಕರನ್ನು ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಗಳಲ್ಲಿ ವ್ಯಸ್ತರನ್ನಾಗಿಸಿದೆ.
           ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 2022 ಎಪ್ರಿಲ್‌ನಲ್ಲಿ ಹಣದುಬ್ಬರದ ಅಧಿಕ ಏರಿಕೆಗೆ ಖನಿಜ ತೈಲಗಳು,ಮೂಲಲೋಹಗಳು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ,ಆಹಾರ ಮತ್ತು ಆಹಾರೇತರ ಸಾಮಗ್ರಿಗಳು,ಆಹಾರ ಉತ್ಪನ್ನಗಳು,ರಾಸಾಯನಿಕ ಉತ್ಪನ್ನಗಳು ಇತ್ಯಾದಿಗಳ ಬೆಲೆ ಹೆಚ್ಚಳವು ಪ್ರಮುಖ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

              ಡಬ್ಲುಪಿಐ ಏರಿಕೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಇಂಧನಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇ.34.52 ಇದ್ದುದು ಎಪ್ರಿಲ್‌ನಲ್ಲಿ ಶೇ.38.66ಕ್ಕೆ ಜಿಗಿದಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಹಣದುಬ್ಬರವು ಎಪ್ರಿಲ್‌ನಲ್ಲಿ ಶೇ.69.07ರಷ್ಟಿದೆ.ಈ ವರ್ಷ ಡಾಲರ್ನೆದುರು ರೂಪಾಯಿ ಶೇ.4ಕ್ಕೂ ಅಧಿಕ ಅಪಮೌಲ್ಯಗೊಂಡಿರುವುದು ಸಹ ಆಮದು ವಸ್ತುಗಳನ್ನು ದುಬಾರಿಯಾಗಿಸಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022, ಎಪ್ರಿಲ್‌ನಲ್ಲಿ ತರಕಾರಿಗಳು,ಗೋದಿ,ಹಣ್ಣುಗಳು ಮತ್ತು ಬಟಾಟೆ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದ್ದರಿಂದ ಆಹಾರ ಸಾಮಗ್ರಿಗಳಲ್ಲಿ ಹಣದುಬ್ಬರವು ಶೇ.8.35ಕ್ಕೇರಿದೆ. ತಯಾರಿತ ಉತ್ಪನ್ನಗಳು ಮತ್ತು ಎಣ್ಣೆಬೀಜಗಳಲ್ಲಿ ಹಣದುಬ್ಬರವು ಅನುಕ್ರಮವಾಗಿ ಶೇ.10.85 ಮತ್ತು ಶೇ.16.1 ಆಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries