ತಿರುವನಂತಪುರಂ: ತಮ್ಮ ಮನೆ ಮಾರಿ ಸಾಲ ತೀರಿಸಲು ಲಕ್ಕೀ ಕೂಪನ್‍ಗಳೊಂದಿಗೆ ತಿರುವನಂತಪುರಂ ನಿವಾಸಿಗಳು ಮುಂದೆಬಂದಿರುವರು. ಮೂರು ಬೆಡ್ ರೂಂ ಇರುವ ಎರಡು ಅಂತಸ್ತಿನ ಮನೆ ಮಾರಾಟಕ್ಕೆ 2000 ರೂ.ಗಳ ಕೂಪನ್ ನೀಡಲಾಗಿದೆ. ಕೂಪನ್ ಡ್ರಾದಲ್ಲಿ ಗೆಲ್ಲುವ ಅದೃಷ್ಟವಂತನು ಮನೆಯನ್ನು ಗೆಲ್ಲಬಹುದು. ಅಕ್ಟೋಬರ್ 17 ರಂದು ಡ್ರಾ ನಡೆಯಲಿದೆ.
ವಟ್ಟಿಯೂರ್ಕಾವು ಮುನ್ನಮ್ಮೂಡು ಪುಲಾರಿ ನಗರದಲ್ಲಿ ಮನೆ ಇದೆ. ಅನ್ಯ ರಾಜ್ಯದಲ್ಲಿ ಉದ್ಯೋಗದಲ್ಲಿದ್ದ ಅಜೋ ಹಾಗೂ ಅನ್ನ ತಮ್ಮ ಸಾಲವನ್ನು ತೀರಿಸಲು ಕೂಪನ್ ಯೋಜನೆ ಪ್ರಾರಂಭಿಸಿರುವರು. ಮೂರು ವರ್ಷಗಳ ಹಿಂದೆ ಬ್ಯಾಂಕ್‍ನಲ್ಲಿ 45 ಲಕ್ಷ ಸಾಲ ಮಾಡಿ ಮನೆ ಖರೀದಿಸಿದ್ದರು. ಉದ್ಯಮ ಆರಂಭಿಸಿ ನೆಲೆಯೂರುವುದು ಗುರಿಯಾಗಿತ್ತು. ಆದರೆ ಕೊರೋನಾದಿಂದ ಉಂಟಾದ ಬಿಕ್ಕಟ್ಟು ಅವರ ಎಲ್ಲಾ ಯೋಜನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿತು.
ಮನೆ ಮಾರಾಟ ಮಾಡಲು ಯತ್ನಿಸಿದರೂ 55 ಲಕ್ಷ ರೂ.ಗಿಂತ ಹೆಚ್ಚು ಹಣ ನೀಡಲು ಯಾರೂ ಮುಂದೆಬಂದಿರಲಿಲ್ಲ. ಇದರೊಂದಿಗೆ 3700 ಕೂಪನ್‍ಗಳನ್ನು ಮಾರಾಟ ಮಾಡಲು ನಿರ್ಧರಿಸಲಾಯಿತು. 3500 ಟಿಕೆಟ್ ಮಾರಾಟ ಮಾಡಿ ಕನಿಷ್ಠ 70 ಲಕ್ಷ ರೂಪಾಯಿ ಪಡೆಯುವುದು ಅವರ ಆಲೋಚನೆಯಾಗಿದೆ.
ಡ್ರಾ ತೆರಿಗೆಯಾಗಿ 18 ಲಕ್ಷ ಪಾವತಿಸಬೇಕಾಗುತ್ತದೆ. ಸಾಲ ತೀರಿಸಿ ಉಳಿದ 20 ಲಕ್ಷ ರೂ.ಗಳಿಂದ ಸದ್ದಿಲ್ಲದೆ ಬದುಕಲು ಬಯಸುತ್ತಿದ್ದಾರೆ. ಇಲ್ಲಿಯವರೆಗೆ 100 ಕೂಪನ್‍ಗಳು ಮಾರಾಟವಾಗಿವೆ.





