ತಿರುವನಂತಪುರ: ರಾತ್ರಿ ಉದ್ಯೋಗ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್ ಹಾಗೂ ಆಕೆಯ ಪತಿ ಮೇಲೆ ನೈತಿಕ ಪೋಲೀಸ್ ಗಿರಿ ನಡೆಸಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಗೂಂಡಾ ಸ್ವತಃ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೃತನನ್ನು ವೆಂಜಾರಮೂಡು ಮೂಲದ ಸುಬಿನ್ ಎಂದು ಗುರುತಿಸಲಾಗಿದೆ. ಮುತ್ತುವಿಲಾದಲ್ಲಿ ಸ್ನೇಹಿತನ ಮನೆಯಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ವಾರ ಸುಬಿನ್ ಮತ್ತು ಆತನ ತಂಡ ನೈತಿಕ ಗೂಂಡಾಗಳ ಸೋಗಿನಲ್ಲಿ ನರ್ಸ್ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸಿತ್ತು. ಇದರಲ್ಲಿ ಸುಬಿನ್ ಮೊದಲ ಆರೋಪಿ. ಮತ್ತೋರ್ವ ಆರೋಪಿ ಮೋಹನನನ್ನು ಪೋಲೀಸರು ಬಂಧಿಸಿದ್ದಾರೆ. ಘಟನೆಯ ನಂತರ ಪೋಲೀಸರಿಂದ ತಪ್ಪಿಸಿಕೊಳ್ಳಲು ಸುಬಿನ್ ಸ್ನೇಹಿತನ ಮನೆಯಲ್ಲಿ ಅಡಗಿಕೊಂಡಿದ್ದ.
ಘಟನೆಯಲ್ಲಿನ ಖಿನ್ನತೆ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಸುಬಿನ್ ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನೇಹಿತ ಸುಜಿತ್ ಊಟ ತರಲು ಅಡುಗೆ ಕೋಣೆಗೆ ಬಂದಾಗ ಬಾವಿಯಿಂದ ಶಬ್ದ ಕೇಳಿಸಿತು. ಏನೆಂದು ನೋಡುತ್ತಿರುವಂತೆ ಬಾವಿಯಲ್ಲಿ ಸುಬಿನ್ ಕಂಡಿದ್ದು. ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಮೇಲೆತ್ತಿ ವೆಂಜಾರಮೂಡು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.





