HEALTH TIPS

ಜಿ-20 ರಾಷ್ಟ್ರಗಳ ಪೈಕಿ, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಪ್ರಧಾನಿ ಮೋದಿ

            ಹೈದರಾಬಾದ್: ಭಾರತ ಜಿ-20 ರಾಷ್ಟ್ರಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

           ಹೈದರಾಬಾದ್ ನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್ ಬಿ) ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ, ಸ್ಟಾರ್ಟ್ ಅಪ್ ವಾತಾವರಣದ ಜೊತೆಗೆ ಹಲವು ಸಾಧನೆಗಳನ್ನು ಭಾರತ ಮಾಡಿದ್ದು, ಕಳೆದ ವರ್ಷ ದೇಶ ಅತಿ ಹೆಚ್ಚು ಎಫ್ ಡಿಐ ನ್ನು ಆಕರ್ಷಿಸಿದೆ ಎಂದು ಹೇಳಿದ್ದಾರೆ. 

            ಅಂತರ್ಜಾಲ ಬಳಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಗ್ಲೋಬಲ್ ರೀಟೇಲ್ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಮೂರನೇ ಅತಿ ದೊಡ್ಡ ಸ್ಟಾರ್ಟ್ ಅಪ್ ಎಕೋಸಿಸ್ಟಮ್ ನ್ನು ಹೊಂದಿದೆ ಇಂತಹ ಅನೇಕ ಸಾಧನೆಗಳನ್ನು ಭಾರತ ಮಾಡಿದೆ ಎಂದು ಮೋದಿ ಹೇಳಿದ್ದಾರೆ. 

             ಭಾರತ ಎಂದರೆ ಉದ್ಯಮ ಎಂಬುದಕ್ಕೆ ಜಗತ್ತು ಸಾಕ್ಷಿಯಾಗಿದೆ. ಇದು ಸರ್ಕಾರದ ಸಾಧನೆಯಷ್ಟೇ ಅಲ್ಲದೇ ಯುವಕರು, ಐಎಸ್ ಬಿಯಂತಹ ಸಂಸ್ಥೆಗಳ ಪದವೀಧರರ ಸಾಧನೆಯೂ ಆಗಿದೆ ಎಂದು ಮೋದಿ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries