ಉಪ್ಪಳ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಗುಡಿಗಳಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವ ಮೇ. 25 ರಿಂದ 28ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿದೆ ನಡೆಯಲಿದೆ. 25ರಂದು ಸಂಜೆ 3ಕ್ಕೆ ಐಲ ಕ್ಷೇತ್ರದಿಂದ ಹೊರೆಕಾಣಿಕೆ ಶೋಭಾಯಾತ್ರೆ, 6ಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿವರ್ಯರ ಆಗಮನ, ಉಗ್ರಾಣ ಮುಹೂರ್ತ, ಸಂಜೆ 7ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು, 26ರಂದು ಬೆಳಿಗ್ಗೆ 5.30ರಿಂದ ಗಣಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ 6.07 ರಿಂದ 7.26ರ ಮುಹೂರ್ತದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿÀತÀರಣೆ, ಪೂರ್ವಾಹ್ನ 11ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಆಶೀರ್ವಚನ ನೀಡುವರು. ಸಮಿತಿಯ ಗೌರವಾಧ್ಯಕ್ಷ ಎಂ.ಕೆ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವÀರು. ಬಿ.ಕೆ ಮಧೂರು, ಮಧುಸೂದನ ಅಯರ್, ಸಂಜೀವ ಶೆಟ್ಟಿ ಮುಂಬೈ, ಡಾ.ಶ್ರೀಧರ್ ಭಟ್ ಉಪ್ಪಳ, ಮುಖೇಶ್, ಧರ್ಮದರ್ಶಿ ಬಾಬು ಪಚ್ಲಂಪಾರೆ, ಕೃಷ್ಣಪ್ಪ ಪೂಜಾರಿ ದೇರಂಬಳ, ಸುಧಾ ಗಣೇಶ್, ರಾಮಕೃಷ್ಣ ಪುಳಿಕುತ್ತಿ ಮೊದಲಾದವರು ಉಪಸ್ಥಿತರಿರುವರು. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 2ರಿಂದ ಭಂಡಾರ ಮನೆಯಲ್ಲಿ ಶ್ರೀ ಗುಳಿಗ ದೈವದ ಹಾಗೂ ಸಂಜೆ 4ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 7.30ಕ್ಕೆ ಶ್ರೀ ದೈವಗಳ ಭಂಡಾರ ಆಗಮನ, ಅನ್ನಸಂತರ್ಪಣೆ, ರಾತ್ರಿ 8ರಿಂದ 10ರ ತನಕ ಸಾಂಸ್ಕೃತಿಕ ಕಾರ್ಯಕ್ರಮ, 10ರಿಂದ ಶ್ರೀ ಕೊರಗ ತನಿಯ, ಅಣ್ಣಪ್ಪ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ, 27ರಂದು ಸಂಜೆ 7ಕ್ಕೆ ಭಂಡಾರ ಬರುವುದು, 7.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ವಹಿಸುವರು. ಗಣ್ಯರಾದ ಕರ್ನಾಟಕ ಸಚಿವ ಎಸ್.ಅಂಗಾರ, ಗೋಪಾಲ ಚೆಟ್ಟಿಯಾರ್, ಚಲನಚಿತ್ರ ನಟ ರೂಪೇಶ್ ಶೆಟ್ಟಿ, ಶ್ರೀಧರ್ ಶೆಟ್ಟಿ ಮುಟ್ಟಂ, ರಾಮಪ್ಪ ಮಂಜೇಶ್ವರ, ದಾಮೋದರ ಉಬರಳೆ, ಗೋಪಾಲ ಸಾಲ್ಯಾನ್, ಗೋಪಾಲಕೃಷ್ಣ ಶೆಟ್ಟಿ, ಮೀರಾ ಆಳ್ವ ಉಪಸ್ಥಿತರಿರುವರು. ರಾತ್ರಿ 8.30ರಿಂದ ಅನ್ನಸಂತರ್ಪಣೆ, ಬಳಿಕ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 12ರಿಂದ ಶ್ರೀ ಮಹಾಕಾಳಿ ದೈವದ ನೇಮೋತ್ಸವ, ಸಿರಿಮುಡಿ ಗಂಧ ಪ್ರಸಾದ ವಿತರಣೆ, 28ರಂದು ಸಂಜೆ 7ರಿಂದ ಭಂಡಾರ ಏರುವುದು, 8.30ರಿಂದ ಭಕ್ತಿ ಭಾವ ಸಂಗಮ, ರಾತ್ರಿ 8.30ರಿಂದ ಅನ್ನಸಂತರ್ಪಣೆ, ರಾತ್ರಿ 10.30ರಿಂದ ಐಲ ಬ್ರಹ್ಮಶ್ರೀಮೊಗೇರ ದೈವಗಳ ನೇಮೋತ್ಸವ, 12ರಿಂದ ಶ್ರೀ ತನ್ನಿಮಾನಿಗ ದೈವವು ವಾಧ್ಯ ಘೋಷಗಳೊಂದಿಗೆ ಭಂಡಾರ ಮನೆಯಿಂದ ಹೊರಟು ಉತ್ಸವಾಂಗಣಕ್ಕೆ ಪ್ರವೇಶ, 29ರಂದು ಬೆಳಿಗ್ಗೆ 5ಕ್ಕೆ ಶ್ರೀ ದೈವಗಳಲ್ಲಿ ಭಕ್ತಾಧಿಗಳ ಹರಕೆ ಸಮರ್ಪಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕಾರ, ಭಂಡಾರ ಇಳಿಯುವುದರೊಂದಿಗೆ ಸಂಪನ್ನಗೊಳ್ಳಲಿದೆ.




.jpg)
