HEALTH TIPS

ಮಹಾರಾಷ್ಟ್ರ: ವಿಧವಾ ಪದ್ಧತಿ ನಿರ್ಮೂಲನೆಗೆ 34 ಗ್ರಾ.ಪಂ ನಿರ್ಧಾರ

          ಮುಂಬೈ: ಮಹಾರಾಷ್ಟ್ರದ ದಕ್ಷಿಣ ಕೊಲ್ಹಾಪುರ ಕ್ಷೇತ್ರದ 34 ಗ್ರಾಮ ಪಂಚಾಯಿತಿಗಳು ಜೂನ್‌ 6ರಂದು ವಿಧವಾ ಪದ್ಧತಿಯನ್ನು ನಿರ್ಮೂಲನೆ ಮಾಡುವ ಮಹತ್ವದ ನಿರ್ಣಯವನ್ನು ಅಂಗೀಕರಿಸಲಿವೆ ಎಂದು ಕಾಂಗ್ರೆಸ್‌ ಶಾಸಕ ರಿತುರಾಜ್‌ ಪಾಟೀಲ್‌ ಶುಕ್ರವಾರ ತಿಳಿಸಿದ್ದಾರೆ.

          'ಪತಿ ಮೃತಪಟ್ಟಾಗ ಬಲವಂತವಾಗಿ ಪತ್ನಿಯ ಬಳೆ ಒಡೆಯುವ, ಹಣೆಯ ಕುಂಕುಮ ಅಳಿಸುವ, ಮಾಂಗಲ್ಯ ತೆಗೆಯುವ ಅನಿಷ್ಟ ಪದ್ಧತಿಯನ್ನು ತೊಲಗಿಸುವ ಬಗ್ಗೆ 34 ಗ್ರಾಮ ಪಂಚಾಯಿತಿಗಳ ಮನವೊಲಿಸಿದ್ದೇನೆ. ಈ ಬಗ್ಗೆ ಸರ್‌ಪಂಚ್‌, ಉಪ ಸರ್‌ಪಂಚ್‌ ಮತ್ತು ಗ್ರಾಮ ಸೇವಕರೊಂದಿಗೆ ಸಭೆ ನಡೆಸಿದ್ದೇನೆ' ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

             'ಮೇ 4ರಂದು ಕೊಲ್ಹಾಪುರದ ಹೆರ್ವಾಡ ಗ್ರಾಮದಲ್ಲಿ ಮೊದಲ ಬಾರಿ ಇಂಥದ್ದೊಂದು ಕ್ರಾಂತಿಕಾರಿ ಕ್ರಮ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಪ್ರೇರಣೆಗೊಂಡು ದಕ್ಷಿಣ ಕೊಲ್ಹಾಪುರ ವಿಧಾನಸಭಾ ಕ್ಷೇತ್ರದ 34 ಗ್ರಾಮಪಂಚಾಯಿತಿಗಳ ಮನವೊಲಿಸಲಾಯಿತು' ಎಂದು ತಿಳಿಸಿದ್ದಾರೆ.

ಜೂನ್ 6 ಯುದ್ಧವೀರ ಶಿವಾಜಿಗೆ ಛತ್ರಪತಿ ಎಂಬ ಬಿರುದು ಬಂದ ದಿನ. ಈ ದಿನವನ್ನು 'ಶಿವ ರಾಜ್ಯಾಭಿಷೇಕ್‌ ದಿನ' ಎಂದೇ ಆಚರಿಸುತ್ತೇವೆ. ಇದೇ ದಿನ ಮಹತ್ವದ ನಿರ್ಣಯ ಅಂಗೀಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries