HEALTH TIPS

8,000 ಮೀಟರ್ ಎತ್ತರದ 5 ಪರ್ವತಾರೋಹಣ ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಮೋಹಿತೆ ಭಾಜನ

           ಮುಂಬೈ: ಮಹಾರಾಷ್ಟ್ರದ ಸತಾರ ಮೂಲದ ಪ್ರಿಯಾಂಕ ಮೊಹಿತೆ ಕಾಂಚನಜುಂಗ ಪರ್ವತಾರೋಹಣ ಮಾಡಿದ್ದು 8,000 ಮೀಟರ್ ಗಿಂತಲೂ ಮೀರಿದ ಎತ್ತರವಿರುವ ಶಿಖರವನ್ನು ಏರಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

            2020 ರ ತೇನ್ಸಿಂಗ್ ನಾರ್ಗೆ ಸಾಹಸ ಪ್ರಶಸ್ತಿಗೆ ಭಾಜನರಾಗಿರುವ ಪ್ರಿಯಾಂಕ (30) ಕಾಂಚನಜುಂಗಾ (8,586 ಮೀಟರ್) ಪರ್ವತವನ್ನು ಯಶಸ್ವಿಯಾಗಿ ಏರಿದ್ದಾರೆ. ಕಾಂಚನಜುಂಗಾ ಭೂಮಿಯಲ್ಲಿನ ಮೂರನೇ ಅತಿ ಎತ್ತರದ ಪರ್ವತವಾಗಿದೆ. 

          ಏಪ್ರಿಲ್, 2021 ರಲ್ಲಿ ಪ್ರಿಯಾಂಕ ಮೌಂಟ್ ಅನ್ನಪೂರ್ಣ (8,091 ಮೀಟರ್)ಪರ್ವತವನ್ನು ಏರುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಪರ್ವತಾರೋಹಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

           ಮೌಂಟ್ ಎವರೆಸ್ಟ್ (8,849 ಮೀಟರ್) ನ್ನು ಪ್ರಿಯಾಂಕ 2013 ರಲ್ಲಿ ಜಗತ್ತಿನ ಅತ್ಯಂತ ಎತ್ತರದ ಪರ್ವತವನ್ನು ಏರಿದ್ದರು. 2018 ರಲ್ಲಿ ಮೌಂಟ್ ಮಕಲು (8,485 ಮೀಟರ್) 2016 ರಲ್ಲಿ ಮೌಂಟ್ ಕಿಲಿಮಾಂಜಾರೋ ಪರ್ವತ ಏರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries