ಕಾಸರಗೋಡು: ಬೂತ್ ಮಟ್ಟದ ಅಧಿಕಾರಿಗಳ ನೇಮಕಾತಿಗಾಗಿ ನಾನ್ ಗೆಜೆಟೆಡ್ ವಿಭಾಗದ ಸರ್ಕಾರಿ ನೌಕರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೇ 20ರ ಮುಂಚಿತವಾಗಿ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ ಮೂಲಕ ((www.ceo.kerala.gov.in./bloRegistration.html)ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಲ್‍ಓ ಗೆ ಸೇರಲು ಆಸಕ್ತಿ ಹೊಂದಿರುವ ಅಧಿಕಾರಿಗಳ ಡೇಟಾ ಬ್ಯಾಂಕ್ ತಯಾರಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಆಂಡ್ರಾಯ್ಡ್ ಫೆÇೀನ್ ಸ್ವಂತವಾಗಿ ಹೊಂದಿರುವವರು ಮತ್ತು ಚುನಾವಣಾ ಆಐಓಗದ ವಿವಿಧ ಚುನಾವಣಾ ಅಪ್ಲಿಕೇಶನ್‍ಗಳನ್ನು ನಿಭಾಯಿಸಲು ಶಕ್ತರಾಗಿರಬೇಕು. ಫೆÇೀನ್ ಚಾರ್ಜ್ ಸೇರಿದಂತೆ ವರ್ಷಕ್ಕೆ 7200 ರೂಪಾಯಿ ಗೌರವಧನ ಸಿಗಲಿದೆ. ಪ್ರಸ್ತುತ ಬೂತ್ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರು, ಅಗತ್ಯ ಸೇವಾ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ನಿವೃತ್ತರು ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.




