ಕಾಸರಗೋಡು: ಜೀವ ವಿಮಾ ನಿಗಮದ ಸಂರಕ್ಷಣೆಗೆ ಆಗ್ರಹಿಸಿ ನಡೆಯುತ್ತಿರುವ ಆಂದೋಲನದ ಅಂಗವಾಗಿ ಜಿಲ್ಲಾ ಮಟ್ಟದ ರಕ್ಷಣಾ ಸಮಿತಿ ರಚಿಸಲಾಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಜಿಲ್ಲಾ ಸಮಾವೇಶವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ವಿಮಾ ಸಂಘದ ಅಖಿಲ ಭಾರತ ಸಮಿತಿ ಮಾಜಿ ಉಪಾಧ್ಯಕ್ಷ ಕುಞÂಕೃಷ್ಣನ್ ವಿಷಯ ಮಂಡಿಸಿದರು. ಥಾಮಸ್ ಸೆಬಾಸ್ಟಿಯನ್, ಕೆ.ವಿ.ಕೃಷ್ಣನ್, ಷರೀಫ್ ಕೊಡವಂಚಿ, ಕರಿವೆಲ್ಲೂರು ವಿಜಯನ್, ಪಿ.ವಿ.ತಂಬಾನ್ ಮತ್ತು ಪಿ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಅಧ್ಯಕ್ಷ ಟಿ.ಕೆ.ರಾಜನ್ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಕೆ.ಅರವಿಂದನ್ ವಂದಿಸಿದರು. ಎಲ್‍ಐಸಿ ಸಂರಕ್ಷಣಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಿ.ಎಚ್.ಕುಂಜಂಬು ಅಧ್ಯಕ್ಷ, ಕೆ ಅರವಿಂದನ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.





